ಬ್ರಹ್ಮರಕೂಟ್ಲು : ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೆ26ರಂದು ಬೆಳಿಗ್ಗೆ ಭಜನೆ, ಮಹಾಪೂಜೆಯಿಂದ ಮೊದಲ್ಗೊಂಡು ವೈಭವದ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ರಾತ್ರಿ 8 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ ನಾಯ್ಕ್ ಪೆರ್ನೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಹರೀಶ್ ಪೆರ್ಗಡೆ, ರೋಶನ್ ಕೆ ರೈ ಪಚ್ಚಿನಡ್ಕ, ಕೆ ಸುಧಾಕರ್ ಪೂಜಾರಿ ಕೇಪು, ಜಯರಾಜ್ ಬೋಳಂತೂರ್, ಉಮೇಶ್ ಕುಮಾರ್ ವೈ, ರಂಜನ್ ಕುಮಾರ್ ಶೆಟ್ಟಿ, ಶಶಿಪ್ರಭಾ ಗುತ್ತುಬಿತ್ತುಲು,ಕೇಶವ ನಾಯ್ಕ್ ಕೇಪು ಮತ್ತಿತರರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕನ್ನಡ ಮಾಧ್ಯಮ
ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ದಿಶಾ, ಗಗನ್ ಬಿ, ಯಶಿಕಾ, ಉಜ್ವಲ್, ತ್ರಿಷಾ, ದೇವಿಶ್ರೀ ಇವರ ಪ್ರತಿಭೆಯನ್ನು ಗುರುತಿಸಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ದೇವಸ್ಥಾನದ ಟ್ರಸ್ಟಿಗಳಾದ,ಉಮೇಶ್ ರೆಂಜೋಡಿ ಸ್ವಾಗತಿಸಿ,ತಾರಾನಾಥ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರ. ಕಾರ್ಯದರ್ಶಿ ಉದಯ ಕುಮಾರ್ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
ರಾತ್ರಿ 9.30ಯಿಂದ ಯಕ್ಷಜ್ಯೋತಿ ಜ್ಯೋತಿಗುಡ್ಡೆ ಸಂಯೋಜನೆಯಲ್ಲಿ ತರಿಕಿಟ ಕಲಾ ಕಮ್ಮಟ ಜ್ಯೋತಿಗುಡ್ಡೆ ಇದರ ಕಲಾವಿದರಿಂದ ಕೀರ್ತಿಮುಖ ಯಕ್ಷಗಾನ ನಡೆಯಿತು.














