Coastal Bulletin

ದೇಶಾದ್ಯಂತ ನವರಾತ್ರಿ ಹಬ್ಬದ ಸಂಭ್ರಮದ ಜೊತೆಗೆ , ಜಗತ್ತಿನ ಶ್ರೀಮಂತ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಮಂಗಳವಾರದಿಂದ 9 ದಿನಗಳ ಕಾಲ ಬ್ರಹ್ಮೋತ್ಸವದ ಸಂಭ್ರಮವೂ ನಡೆಯಲಿದೆ.

ಸಂಪ್ರದಾಯ ಪ್ರಕಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರು ಹೊಸ ವಸ್ತ್ರಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕೊರೋನಾದಿಂದ 2 ವರ್ಷ ಕಾಲ ಬ್ರಹ್ಮೋತ್ಸವ ಅದ್ದೂರಿಯಾಗಿ ‌ಆಚರಿಸಲು ಆಗಲಿಲ್ಲ.‌ ಹಾಗಾಗಿ ಈ ಸಲ ಬಹಳ ಅದ್ದೂರಿಯಿಂದ ಬ್ರಹ್ಮೋತ್ಸವ ಜರಗಲಿದೆ.

ಹೀಗಾಗಿ, ದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ತಿರುಪತಿಗೆ ಆಗಮಿಸುವ ಸಾಧ್ಯತೆ

ಇದೆ. ಅದಕ್ಕೆ ಪೂರಕವಾಗಿ ತಿರುಪತಿ ತಿರುಮಲ ದೇವಸ್ಥಾನಮ್ಸ್‌(ಟಿಟಿಡಿ) ಆಡಳಿತ ಮಂಡಳಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಹ್ಮೋತ್ಸವ ಕಾರ್ಯಕ್ರಮ ಅ.5ರಂದು ಮುಕ್ತಾಯಗೊಳ್ಳಲಿದೆ.

ಭದ್ರತಾ ವ್ಯವಸ್ಥೆಗಾಗಿ ದೇಗುಲ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಏಳು ಸಾವಿರ ಮಂದಿಯನ್ನು ನಿಯೋಜಿಸಿದೆ. ಗರುಡ ಸೇವಾ ದಿನ ತಿರುಮಲದಲ್ಲಿ ಹೆಚ್ಚುವರಿಯಾಗಿ 2 ಸಾವಿರ ಮಂದಿ ಭದ್ರತಾ ಸಿಬ್ಬಂದಿ ಇರಲಿದ್ದಾರೆ.

Leave a Comment