ಬಂಟ್ವಾಳ: ಯಕ್ಷದ್ರುವ ಪಟ್ಲ ಪೌಂಡೇಶನ್ (ರಿ.) ಮಂಗಳೂರು ಇದರ ನೂತನ ಬಂಟ್ವಾಳ ಘಟಕದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ ಸಿ ರೋಡಿನ ಹೋಟೆಲ್ ರಂಗೋಲಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಕಲಾವಿದರ ಕಷ್ಟ ಅರಿವು ಸತೀಶ ಶೆಟ್ಟಿ ಅವರಿಗಿದ್ದು, ಕರೋಪಾಡಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ದಾನಿಗಳು ಇದ್ದರೆ ಫೌಂಡೇಶನ್ ಗಟ್ಟಿಯಾಗಿ ಬೆಳೆಯುತ್ತದೆ. ಕಲೆ ಮತ್ತು ಕಲಾವಿದ ಬೆಳೆಯಲು ಫೌಂಡೇಶನ್ ಸಹಕಾರಿ. ಸತೀಶ್ ಶೆಟ್ಟಿ ಆದರ್ಶ ವ್ಯಕ್ತಿತ್ವವಾಗಿದ್ದು, ಮಾದರಿಯಾಗಿದ್ದಾರೆ ಎಂದರು.
ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಭಗವಂತನ ಅನುಗ್ರಹವಿದ್ದರೆ, ಯಾವ ಭಾಗ್ಯವಾದರೂ ಪಡೆಯಬಹುದು. ಸತೀಶ್ ಶೆಟ್ಟಿ ಅವರು ಮಾಣಿಲ ಆಶ್ರಮದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕಲಾವಿದರಾಗಿ ನೂರಾರು ಕಲಾವಿದರಷ್ಟೇ ಅಲ್ಲ, ಆರ್ತರಿಗೂ ದಾನ ಮಾಡಿದ್ದಾರೆ ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಕಲಾವಿದರ ಬದುಕಿಗೆ ಆಸರೆಯಾಗಿ ಅವರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಸಲುವಾಗಿ ಪೌಂಡೇಶನ್ ನಿರ್ಮಿಸಿ ಅ ಮೂಲಕ ಸಮಾಜ ಸೇವೆ ಮಾಡುತ್ತಿರುವ ಸತೀಶ್ ಶೆಟ್ಟಿ ಪಟ್ಲ ಅವರ ಕಾರ್ಯ ಶ್ರೇಷ್ಠವಾಗಿದೆ ಎಂದು ಹೇಳಿದರು.
ಪಟ್ಲ ಪೌಂಡೇಶನ್ ನ ಸಮಾಜ ಸೇವೆಯ ಕಾರ್ಯಕ್ಕೆ ಸದಾ ಜೊತೆಯಾಗುತ್ತೇನೆ ಎಂದು ಭರವಸೆ ನೀಡಿದರು. ಕಲಾವಿದರ ಬೆಳವಣಿಗೆಗೆ ಕೊಡುಗೆ ನೀಡುವ ಇವರ
ಯೋಜನೆ ನಿರಂತರವಾಗಿ ಬೆಳೆಯಲಿ ಎಂದು ಶುಭ ಹಾರೈಕೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ,ಮಾಜಿ ಶಾಸಕರುಗಳಾದ ಎ.ರುಕ್ಮಯ ಪೂಜಾರಿ,ಕೆ.ಪದ್ಮನಾಭ ಕೊಟ್ಟಾರಿ, ಪೌಂಡೇಶನ್ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ, ಧಾರ್ಮಿಕ ಮುಂದಾಳು ರವಿಶಂಕರ್ ಶೆಟ್ಟಿ ಬಡಾಜೆಗುತ್ತು, ಪೌಂಡೇಶನ್ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರು,ಬಂಟ್ವಾಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಘಟಕಗಳ ಪದಾಧಿಕಾರಿಗಳು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಯಕ್ಷದ್ರುವ ಪಟ್ಲ ಪೌಂಡೇಶನ್ ಇದರ ಅಧ್ಯಕ್ಷ ಸತೀಶ್ ಪಟ್ಲ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು. ದೇವದಾಸ್ ಶೆಟ್ಟಿ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಜಗನ್ನಾಥ ಚೌಟ ಬದಿಗುಡ್ಡೆ ವಂದಿಸಿದರು.
ಬಂಟ್ವಾಳ ಘಟಕದ ಪದಾಧಿಕಾರಿಗಳ ವಿವರ
ದೇಶ ವಿದೇಶಗಳಲ್ಲಿ ಒಟ್ಟು 38 ಘಟಕಗಳು ನಿರ್ಮಾಣವಾಗಿದ್ಸು,ಬಂಟ್ವಾಳ ಘಟಕದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ ಬದಿಗುಡ್ಡೆ,ಬಂಟ್ವಾಳ ಘಟಕದ ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ರಂಗೋಲಿ, ಸಂಚಾಲಕರಾಗಿ ಭುವನೇಶ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ದೇವದಾಸ್ ಶೆಟ್ಟಿ ಬಂಟ್ವಾಳ, ಉಪಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಭುಜಂಗ ಸಾಲಿಯಾನ್ ಬಿಸಿರೋಡು, ಜಯಪ್ರಕಾಶ್ ಜಕ್ರಿಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಮೋಹನ ದಾಸ್ ಕೊಟ್ಟಾರಿ ಸಜೀಪ, ಕೋಶಾಧಿಕಾರಿ ಶಂಕರ್ ಶೆಟ್ಟಿ ಪರಾರಿಗುತ್ತು ಇವರ ಜೊತೆ 12 ಜನ ಗೌರವಸಲಹೆಗಾರರನ್ನು ಘಟಕದಲ್ಲಿ ಆಯ್ಕೆಮಾಡಲಾಗಿದೆ.















