ಬಂಟ್ವಾಳ :ಮಾಜಿ ಸಚಿವ ಬಿ ರಮಾನಾಥ ರೈ ಅವರ ದಕ್ಷತೆಯ ನಾಯಕತ್ವವನ್ನು ಮೆಚ್ಚಿ ಸಮಾಜ ಸೇವಕರು, ಸಾಮಾಜಿಕ ಚಿಂತಕರುಗಳಾದ ಗುಬ್ಯಮೇಗಿನ ಗುತ್ತಿನ ಶ್ರೀಧರ ಕೆ ಶೆಟ್ಟಿ ಹಾಗೂ ಪಟ್ಲಗುತ್ತಿನ ದಾಮೋದರ ಶೆಟ್ಟಿ ಅವರು ಬುಧವಾರರೈ ಚುನಾವಣಾ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭ ಮಾತನಾಡಿದ ಶ್ರೀಧರ ಶೆಟ್ಟಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಮಾನಾಥ ರೈಯವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂಬ ಉದ್ದೇಶವಿದೆ. ಕ್ಷೇತ್ರದ ಜನತೆಯ ಮನವೊಲಿಸಿ ರೈಯವರ ವಿಜಯ ಪತಾಕೆ ಮತ್ತೊಮ್ಮೆ ಹಾರುವಂತೆ ಮಾಡಬೇಕು ಎಂದರು.
ದಾಮೋದರ ಶೆಟ್ಟಿ ಮಾತನಾಡಿ, ರೈಗಳು ಅಧಿಕಾರದಲ್ಲಿದ್ದಾಗ ಸಾಕಷ್ಟು ಪ್ರಗತಿ ಕಾರ್ಯಗಳನ್ನು
ಮಾಡಿದ್ದಾರೆ. ಕ್ಷೇತ್ರಕ್ಕಾಗಿ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ಜನತೆ ಮತದಾನ ಮಾಡಬೇಕು. ಅವರಂತಹ ದೂರದೃಷ್ಟಿಯುಳ್ಳ ನಾಯಕರು ನಮಗೆ ನಾಯಕರಾದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭ ಪಕ್ಷ ಪ್ರಮುಖರಾದ ಹಾಜಿ ಎ ಉಸ್ಮಾನ್ ಕರೋಪಾಡಿ, ಸುಧಾಕರ ಶೆಟ್ಟಿ ಖಂಡಿಗ, ಅಲ್ತಾಫ್ ಸಂಗಬೆಟ್ಟು, ನಾರಾಯಣ ನಾಯ್ಕ್, ಪರಮೇಶ್ವರ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.















