Coastal Bulletin

ಬಂಟ್ವಾಳ :ಸ್ವಾಮಿ ವಿವೇಕಾನಂದ ಯುವಕರ ಸಂಘ ಮತ್ತು ಅಯ್ಯಪ್ಪ ಮಂದಿರ ಮೊಡಂಕಾಪು ಇವರ ವತಿಯಿಂದ 33ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವವು ಜ.6 ರಂದು ಶುಕ್ರವಾರ ನಡೆಯಲಿದೆ.

ಜ.6‌ ರಂದು ಬೆಳಗ್ಗೆ 6 ಗಂಟೆಗೆ ಗಣಹೋಮ ನಂತರ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ. ಮುಂದೆ 12 ಗಂಟೆಗೆ ಸ್ವಾಮಿಗೆ ಸೀಯಾಳಭಿಷೇಕ ಮತ್ತು ಕ್ಷೀರಾಭಿಷೇಕ ಆಗಲಿದೆ.

ಸಂಜೆ 4 ಗಂಟೆಯಿಂದ ರಾತ್ರಿ 10 ರವರೆಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ

ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಡೆಯಲಿದೆ.

33 ನೇ ಅಯ್ಯಪ್ಪ ದೀಪೋತ್ಸವವು ಮೊಡಂಕಾಪು ಶ್ರೀ ಮಾರಪ್ಪ ಗುರಸ್ವಾಮಿ ಇವರ ನೇತ್ರತ್ವದಲ್ಲಿ ಮತ್ತು ಜ್ಯೋತಿರ್ವಿದ್ವಾನ್ ಮಹೇಶ್ ಭಟ್ ಇವರ ಪೌರೋಹಿತ್ಯದಲ್ಲಿ ಜರಗಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment