ಬಂಟ್ವಾಳ: ಇಲ್ಲಿನ ರಾಯಿ-ಕೊಯಿಲ-ಅರಳ ಸಾರ್ವಜನಿಕ ಶ್ರೀ ಶಾರದೋತ್ಸವ ಪ್ರಯುಕ್ತ ರಾಯಿ ಪೇಟೆಯಲ್ಲಿ ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 10 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಇದೇ ವೇಳೆ ಪುಂಜಾಲಕಟ್ಟೆ ತಾಂಬೂಲ ಕಲಾವಿದರಿಂದ ತುಳು ನಾಟಕ ಸಹಿತ ಸ್ಥಳೀಯ ಕೈತ್ರೋಡಿ ನೃತ್ಯಾಂಜಲಿ ಕಲಾ ತಂಡದ ಬಾಲ ಪ್ರತಿಭೆಗಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು. ಪ್ರಗತಿಪರ ಕೃಷಿಕ ರಾಮಸುಂದರ ಗೌಡ ಗೋಳಿತೊಟ್ಟು ಶುಭ ಹಾರೈಸಿದರು. ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಮುಖಂಡರಾದ ಬಿ.ದೇವದಾಸ ಶೆಟ್ಟಿ, ಮಾಧವ ಎಸ್.ಮಾವೆ ಭೇಟಿ ನೀಡಿದರು.
ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಗೌಡ ಕಾರಂಬಡೆ, ಸ್ಥಾಪಕಾಧ್ಯಕ್ಷ ಹರೀಶ ಆಚಾರ್ಯ ರಾಯಿ, ಟ್ರಸ್ಟಿ ಕೆ.ಪರಮೇಶ್ವರ ಪೂಜಾರಿ, ಪ್ರವೀಣ ಅಂಚನ್ ಕೊಯಿಲ,
ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಗೌಡ ಮತ್ತಾವು, ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಸದಸ್ಯ ರವೀಂದ್ರ ಪೂಜರಿ ಬದನಡಿ, ಮಾಜಿ ಸದಸ್ಯ ರಾಘವ ಅಮೀನ್, ಪ್ರಮುಖರಾದ ಲೋಕೇಶ ಕೈತ್ರೋಡಿ, ಮಧುಕರ ಬಂಗೇರ, ಚಂದಪ್ಪ ಪೂಜಾರಿ ಮಾಬೆಟ್ಟು, ಕೃಷ್ಣಪ್ಪ ಪೂಜಾರಿ ಕಾರಂಬಡೆ, ಸುಧಾಕರ ಶೆಟ್ಟಿ ಪಾಂಚಕೋಡಿ ಮತ್ತಿತರರು ಇದ್ದರು.
ಪ್ರಜ್ವಲ್ ಸಿದ್ಧಕಟ್ಟೆ ಮತ್ತು ಮೋಹನ್ ಕೆ.ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.














