Coastal Bulletin

ಉಡುಪಿ : ಕರಾವಳಿ ಜಿಲ್ಲೆ ಉಡುಪಿಯಲ್ಲಿ ಲವ್ ಜಿಹಾದ್ ಗೆ ಮತ್ತೊಂದು ಹಿಂದೂ ಯುವತಿ ಬಲಿಯಾಗಿದ್ದಾಳೆ. ಮೊದಲೇ ಮದುವೆಯಾಗಿದ್ದ ಅಜೀಜ್ ಎಂಬ ಮುಸ್ಲೀಂ ಯುವಕನೊಬ್ಬ ಈಕೆಯನ್ನು ವಂಚಿಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ. ಇದೊಂದು ಲವ್ ಜಿಹಾದ್ ಮತ್ತು ಒತ್ತಾಯದ ಮತಾಂತರ ಪ್ರಕರಣ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

ಶಿಲ್ಪಾ ಕುಂದಾಪುರ ತಾಲೂಕಿನ  ಹುಡುಗಿ, ತಲ್ಲೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು.‌ ಕೆಲವರ್ಷಗಳ ಹಿಂದೆ ಟ್ಯುಟೋರಿಯಲ್ ನಲ್ಲಿ 10 ನೇ ತರಗತಿ ಕಲಿಯುತ್ತಿದ್ದಾಗ ಅಜೀಜ್ ಎಂಬಾತನ ಪರಿಚಯ ಪ್ರೀತಿಗೆ ತಿರುಗಿತು. ಅಜೀಜ್ ಗೆ ಈ ಮೊದಲೇ ಸಲ್ಮಾ ಎಂಬಾಕೆಯೊಂದಿಗೆ ಮದುವೆಯಾಗಿತ್ತು. ಆತನಿಗೊಂದು  ಮಗು ಕೂಡ ಇದೆ. ಇಷ್ಟಾದರೂ ಶಿಲ್ಪಾಳನ್ನು ಮದುವೆಯಾಗುವುದಾಗಿ ನಂಬಿಸಿ ಅಜೀಜ್ ಮೋಸ ಮಾಡಿದ್ದ. ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಆತ ಕರೆದಾಗಲೆಲ್ಲ ಶಿಲ್ಪಾ ಆತ ವಾಸವಿರುವ ಕೋಟೇಶ್ವರದ ಫ್ಲ್ಯಾಟಿಗೆ ಹೋಗಿ ಬರುತ್ತಿದ್ದಳು. ಇವರ ನಡುವಿನ ಸಂಬಂಧ ಪತ್ನಿ ಸಲ್ಮಾಗೂ ಗೊತ್ತಿತ್ತು. ಆಕೆ ಕೂಡ ಈ

ಸಂಬಂಧಕ್ಕೆ ಕುಮ್ಮಕ್ಕು ನೀಡಿದ್ದಳು ಎಂದು ಹೇಳಲಾಗುತ್ತಿದೆ.

ಅಜೀಜ್ ಮತ್ತು ಶಿಲ್ಪಾ ಕಳೆದ ನಾಲ್ಕೈದು ವರ್ಷದಿಂದ ಒಡನಾಟ ಹೊಂದಿದ್ದರು. ಆದರೆ ಇತ್ತೀಚೆಗೆ ಅಜೀಜ್ ಶಿಲ್ಪಾಳನ್ನು ದೂರ ಮಾಡಿದ್ದ. ಕೆಲಸ ಮಾಡುವ ಬಟ್ಟೆ ಅಂಗಡಿಯ ಬಳಿ ಬಂದು ತನ್ನಿಂದ ದೂರವಾಗುವಂತೆ ಹೇಳಿದ್ದ. ನೀನು ಸತ್ತೇ ಹೋಗು ನನಗೆ ನೀನು ಬೇಡ ಎಂದು ಹೇಳಿದ್ದ. ಆ ಬೆನ್ನಲ್ಲೆ ಶಿಲ್ಪಾ ಆತ್ಮಹತ್ಯೆಗೆ ಮುಂದಾಗಿದ್ದಾಳೆ.

ಕಳೆದ 3 ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾಳೆ.‌ ತಕ್ಷಣವೇ ಈಕೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನಗಳ ಕಾಲ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಶಿಲ್ಪಾ ಅಸುನೀಗಿದ್ದಾಳೆ.

Leave a Comment