ಮೇ 5 ರಂದು ಮೊಡಂಕಾಪು ರೋಟರಿ ಕ್ಲಬ್ ಮತ್ತು ಇನ್ಪೆಂಟ್ ಜೀಜಸ್ ಚರ್ಚ್ ಇವರ ಪ್ರಾಯೋಜಕತ್ವದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇವರ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಅಂಧತ್ವ ಹತೋಟಿ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಲಾಕ್ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು, ಕೆ.ಎಂ. ಸಿ. ಮಂಗಳೂರು ಇವರ ಸಹಯೋಗದಲ್ಲಿ ಉಚಿತ ನೇತ್ರಾ ಚಿಕಿತ್ಸಾ ಶಿಬಿರ ಹಾಗೂ ಅಂಗಾಂಗ ದಾನ ಅನ್ನುವ ಕಾರ್ಯಕ್ರಮವನ್ನು ಬಹಳಷ್ಟು ಸುಂದರವಾಗಿ ಮೂಡಿಬಂತು.
ಮೊಡಂಕಾಪು ಇನ್ಪೆಂಟ್ ಜೀಜಸ್ ಚರ್ಚಿನ ರೆವೆರೆಂಡ್ ಫಾದರ್ ವಲೇರಿಯನ್ ಡಿ.ಸೋಜಾ ಅವರು ಸಾಮಾಜಿಕ ಕಳಕಳಿಯ ಮಹತ್ವವ ಅರಿತು ಕಾರ್ಯಕ್ರಮದಲ್ಲಿ ಕೈ ಜೋಡಿಸಿದರು..
ಸುಮಾರು 175 ಜನರ ಕಣ್ಣು ಪರೀಕ್ಷೆ ಮಾಡಿ 115 ಜನ ಉಚಿತವಾಗಿ ಕನ್ನಡಕವ ಪಡೆದು ನಗುಮುಖದಿಂದ ಸಾಗಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ನಿಯೋಜಿತ
ಅಧ್ಯಕ್ಷರು ಕಾರ್ಯಕ್ರಮದ ಸಂಯೋಜಕರು ಆದ ಡಾ. ಗೋವರ್ಧನ ರಾವ್ ಹಾಗೂ ಅವರ ಮಗ ಪ್ರಜ್ವಲ್ ಕುಮಾರ್ ಅಂಗಾಂಗ ದಾನದ ಘೋಷಣೆ ಮಾಡುವ ಮೂಲಕ ಸಮಾಜ ಇತರರಿಗೆ ಪ್ರೇರಣೆಯಾದರು. ಅದೇ ರೀತಿ ಇತರ 12 ಜನ ಅಂಗಾಂಗ ದಾನ ಮಾಡಲು ಮುಂದೆ ಬಂದರು.














