ಸಿ ರೋಡ್ :ಸಂವಿಧಾನ ತಿದ್ದುಪಡಿ ಹೇಳಿಕೆ ಖಂಡಿಸಿ ಭಾ ಜ ಪಾ ಮಂಡಲ ವತಿಯಿಂದ ಪ್ರತಿಭಟನೆ

Coastal Bulletin
ಸಿ ರೋಡ್ :ಸಂವಿಧಾನ ತಿದ್ದುಪಡಿ ಹೇಳಿಕೆ ಖಂಡಿಸಿ ಭಾ ಜ ಪಾ ಮಂಡಲ ವತಿಯಿಂದ ಪ್ರತಿಭಟನೆ

ಬಂಟ್ವಾಳ :ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಯನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ಮಾ. 26ರಂದು ಬಿಸಿರೋಡಿನ ಪ್ಲೈ ಓವರ್ ನ ಕೆಳಗೆ ಪ್ರತಿಭಟನೆ ನಡೆಯಿತು.

ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ಹೇಳಿಕೆ ‌ನೀಡಿರುವ ಡಿಕೆಶಿಯವರ ಪ್ರತಿಕೃತಿ ದಹನ ಮಾಡಿದ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಘೋಷಣೆ ಕೂಗಿದರು.

ಪ್ರ gತಿಭಟನೆಯನ್ನು ಉದ್ದೇಶಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಅತೀ ಹೆಚ್ಚು ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಿದೆ, ಸದನದಲ್ಲಿ ಉದ್ದೇಶಪೂರ್ವಕವಾಗಿ ಬಿಜೆಪಿಯ18 ಶಾಸಕರನ್ನು 6 ತಿಂಗಳ ಕಾಲ ಸಸ್ಪಂಡ್ ಮಾಡಿ ಸರಕಾರ ಬಹಳ ದೊಡ್ಡ ತಪ್ಪುಮಾಡಿದೆ, ದೇಶದ ಮುಂದೆ ಉಪಮುಖ್ಯಮಂತ್ರಿ ಕ್ಷಮೆ ಕೇಳಿ ತಮ್ಮ ಹುದ್ದೆ ತ್ಯಜಿಸಿಬೇಕು ಎಂದು ಹೇಳಿದರು.

ಹನಿಟ್ರ್ಯಾಫ್ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿಗೆ ಸದನ ಕಾರಣವಾಗಿದ್ದ ಬಿಸಿಬಿಸಿ ವಾತಾವರಣದ ನಡುವೆ ಸಂವಿಧಾನ ವಿರೋಧಿ ಬಿಲ್ ಪಾಸ್ ಮಾಡಲು

ಕಾಂಗ್ರೆಸ್ ಮುಂದಾಗಿದ್ದ ವೇಳೆ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅ ಸಮಯದಲ್ಲಿ ಶಾಸಕರ ಅಮಾನತು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಬಂಟ್ವಾಳ ‌ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿರಾಗಾಂಧಿ ವಂಶದಿಂದ ಬಂದ ಡಿಕೆಶಿ ಅವರು ಸಂವಿಧಾನವನ್ನು ಬದಲು ಮಾಡಿಯಾದರೂ ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿರುವುದು ನಾಚಿಕೆಯ ವಿಚಾರ ಎಂದು ಅವರು ತಿಳಿಸಿದರು.

ಬಿಜೆಪಿ ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ, ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ, ಕಮಲಾಕ್ಷಿ ಪೂಜಾರಿ, ಪ್ರಭಾಕರ ಪ್ರಭು, ದಿನೇಶ್ ಅಮ್ಟೂರು,ದೇವಪ್ಪ ಪೂಜಾರಿ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಭಂಡಾರಿ ಹಾಗೂ ಮಂಡಲದ ‌ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತ ರಿದ್ದರು.

Leave a Comment