ಬ್ರಹ್ಮರಕೂಟ್ಲು: ಟೀಮ್ ಸತ್ಯಜಿತ್ ಸುರತ್ಕಲ್ ಜನಾಗ್ರಹ ಸಮಾವೇಶ. ದಕ್ಷಿಣ ಕನ್ನಡದಲ್ಲಿ ಭಾ ಜ ಪಾ ದಿಂದ ಟಿಕೆಟ್ ಸಿಗುವ ವಿಶ್ವಾಸ :ಸತ್ಯಜಿತ್ ಸುರತ್ಕಲ್.

Coastal Bulletin
ಬ್ರಹ್ಮರಕೂಟ್ಲು: ಟೀಮ್ ಸತ್ಯಜಿತ್ ಸುರತ್ಕಲ್ ಜನಾಗ್ರಹ ಸಮಾವೇಶ. ದಕ್ಷಿಣ ಕನ್ನಡದಲ್ಲಿ ಭಾ ಜ ಪಾ ದಿಂದ ಟಿಕೆಟ್ ಸಿಗುವ ವಿಶ್ವಾಸ :ಸತ್ಯಜಿತ್ ಸುರತ್ಕಲ್.

ಬಂಟ್ವಾಳ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 26 ವರ್ಷಗಳಿಂದ ಹಿಂದುತ್ವ ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲು ಪ್ರಾಣ ಒತ್ತೆಯಿಟ್ಟು ದುಡಿದ ನನ್ನಂತಹವರಿಗೆ ಬಿಜೆಪಿ ಈ ಬಾರಿ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂಬುದು ಸಹಸ್ರಾರು ಮಂದಿ ಕಾರ್ಯಕರ್ತರ ಒಕ್ಕೊರಳ ಆಗ್ರಹವಾಗಿದೆ,ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.

ಅವರು ಬ್ರಹ್ಮರಕೂಟ್ಲು ಸಮೀಪದ ಬಂಟ್ವಾಳ ಬಂಟರ ಭವನದಲ್ಲಿ ಫೆ 25ರಂದು ಭಾನುವಾರ ಸಂಜೆ ನಡೆದ ಜನಾಗ್ರಹ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಕಾರ್ಯಕರ್ತರ ಆಗ್ರಹದ ದೃಷ್ಟಿಯಿಂದ ಸ್ಪರ್ಧೆಗಾಗಿ ಅಪೇಕ್ಷೆ ಪಟ್ಟಿದ್ದೇನೆ ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ . ಹಲವು ಸಲ ಅವಕಾಶ ನಿರಾಕರಣೆಯಾದರೂ ಸಂಘಟನೆಯಲ್ಲಿ ದುಡಿದಿದ್ದೇನೆ. ಅವಕಾಶ ಕೇಳಿದಾಗ ಹಿಂದುಳಿದ ವರ್ಗಗಳ ಮೋರ್ಚಾದಲ್ಲಿ ಅವಕಾಶ ನೀಡಿದ್ದು, ಗ್ರಾಮ ಮಟ್ಟಕ್ಕೆ ಮೋರ್ಚಾವನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದೇನೆ. ಈ ಬಾರಿ ಲೋಕಸಭಾ ಸ್ಥಾನಕ್ಕೆ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ದಿಸುವ ಆಕಾಂಕ್ಷಿ ನಾನು ಎಂದು ಹೇಳಿದರು.

ಹಿಂದೊಮ್ಮೆ ಶಾಸಕ ಸ್ಥಾನ ಕೇಳಿದಾಗ ಸೀಟು ಕೊಡಲು ಹಿಂದುತ್ವದ ಹೋರಾಟ ಒಂದೇ ಮಾನದಂಡ ಅಲ್ಲ ಎಂದು ಬೇರೆ ಪಕ್ಷದಲ್ಲಿದ್ದ ವ್ಯಕ್ತಿಗೆ ಸೀಟನ್ನು ನೀಡಿದ್ದರು. ಪ್ರತಿ ಬಾರಿಯೂ ಅವಕಾಶ ನಿರಾಕರಣೆ ಮಾಡಿದರೂ ನಮ್ಮಿಂದ ತಪ್ಪಾಗಿದೆ, ಕ್ಷಮಿಸು

ಎಂಬ ಮಾತನ್ನು ಯಾರೂ ಹೇಳಿಲ್ಲ. ಒಂದು ಸಭೆಗೆ ಅಪೇಕ್ಷಿತರಲ್ಲ ಎಂದು ಹೇಳಿದ ಕಾರಣ ಕಳೆದ ೬ ವರ್ಷಗಳಿಂದ ದ.ಕ.ಜಿಲ್ಲಾ ಬಿಜೆಪಿ ಕಚೇರಿಗೆ ಹೋಗಿಲ್ಲ. ಕಳೆದ ಬಾರಿ ಲೋಕಸಭೆಗೆ ಸೀಟು ಕೇಳಿ ಕಾರ್ಯಕರ್ತರು ಬ್ಯಾನರ್ ಹಾಕಿದಾಗಯಡಿಯೂರಪ್ಪನವರೇ ಕರೆಸಿ ಅದನ್ನು ತೆಗೆಯಲು ಹೇಳಿ ಅವಕಾಶ ಭರವಸೆ ನೀಡಿದ್ದರು. ಬಳಿಕ ಅವರು ಕೂಡ ಕರೆಸಿ ಮಾತಾಡಿಲ್ಲ.

ಡಾ| ಪ್ರಭಾಕರ ಭಟ್ ಅವರು ಕರೆಸಿ ಬೇಡಿಕೆ ಏನು ಎಂದು ಕೇಳಿದಾಗಲೂ ಲೋಕಸಭಾ ಸ್ಪರ್ಧೆಯ ಅವಕಾಶದ ಕುರಿತು ಹೇಳಿದ್ದೇನೆ. ಪಕ್ಷಕ್ಕೆ ಕಾರ್ಯಕರ್ತರು ಅನಿವಾರ್ಯ ಎಂಬುದನ್ನು ತೋರಿಸಿಕೊಡುವ ಕಾರ್ಯ ಮಾಡಲಿದ್ದೇನೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಯ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು, ತಮ್ಮ ಜಿಲ್ಲೆಗೆ ಸತ್ಯಜಿತ್ ಸುರತ್ಕಲ್ ಮಾಡಿದ ಸಮಾಜ ಸೇವೆಯನ್ನು ನೆನಪಿಸಿದರು.

ಧನಂಜಯ ಕುಂದಾಪುರ ಪ್ರಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು,ಯಶ್ ಪಾಲ್ ಸಾಲ್ಯಾನ್ ವಂದಿಸಿ,ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Comment