Coastal Bulletin

ಬಂಟ್ವಾಳ :ಲಯನ್ಸ್ ಕ್ಲಬ್ ಮಾಣಿಯ 2022-23 ರರ ಸಾಲಿನ ಲಯನ್ಸ್ ಜಿಲ್ಲೆ 317 ಡಿ ಜಿಲ್ಲಾ ರಾಜ್ಯಪಾಲರ ಅಧಿಕೃತ್ತ ಭೇಟಿ ಕಾರ್ಯಕ್ರಮವು ಬ್ರಹ್ಮ ಶ್ರೀ ನಾರಾಯಣ ಗುರು ಸಭಾ ಭವನ ಮಾಣಿಯಲ್ಲಿ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ಕ್ಲಬ್ ನ ಸೇವಾ ಯೋಜನೆಗಳಾದ ಪೆರಾಜೆ ಗ್ರಾಮದಲ್ಲಿ ಸಾರ್ವಜನಿಕ ಟಾಯ್ಲೆಟ್ ಲೋಕಾರ್ಪಣೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಗೆ ಮಕ್ಕಳ ಕ್ರೀಡಾ ಪಾರ್ಕ್ ಆವರಣ ಗೋಡೆ ಉದ್ಘಾಟನೆ,ಕರಿಮಜಲು ಕೆದಿಲ ಅಂಗನವಾಡಿ ಕೇಂದ್ರಕ್ಕೆ ಅಶೋಕ ಸ್ತoಭ ಲೋಕಾರ್ಪಣೆ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯಕ್ಕೆ ಪೀಟೋಪಕರಣಗಳ ಕೊಡುಗೆ, ಬರಿಮಾರು ಮಾದುಗುರಿ ಅಂಗನವಾಡಿ ಮತ್ತು ಮಾಣಿ ಗ್ರಾಮದ ಶಂಭುಗ ಅಂಗನವಾಡಿ ಕೇಂದ್ರಕ್ಕೆ ತಲಾ 1 ಗೋದ್ರೇಜ್ ಕಪಾಟು ನೀಡಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲರಾದ ಲಯನ್ ಸಂಜೀತ್ ಶೆಟ್ಟಿ pmjf ಇತರ ಸೇವಾ ಕಾರ್ಯಕ್ರಮಗಳನ್ನು ನಡೆಸಿದ , ಲಯನ್ಸ್ ಕ್ಲಬ್ ಮಾಣಿಯ ಸೇವಾ ಕಾರ್ಯಗಳನ್ನು ಕೊಂಡಾಡಿದರು, ಮುಂದಿನ ದಿನಗಳಲ್ಲಿ

ಉತ್ತಮ ಸದಸ್ಯರನ್ನು ಸೇರಿಸುವುದರೊಂದಿಗೆ ಕ್ಲಬ್ ಇನ್ನು ಎತ್ತರಕ್ಕೆ ಸಾಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ರಾಜ್ಯಪಾಲರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷರಾದ ಉಮೇಶ್ ಪಿ,ಜಿಲ್ಲಾ ಕಾರ್ಯದರ್ಶಿ ಅನಿಲ್ ಕುಮಾರ್, ಕೋಶಾಧಿಕಾರಿ ರಾಮ್ ಮೋಹನ್ ಆಳ್ವಾ, ಪ್ರಾಂತೀಯ ಅಧ್ಯಕ್ಷರಾದ ಲಕ್ಷ್ಮಣ್ ಕುಲಾಲ್, ವಲಯ ಅಧ್ಯಕ್ಷರಾದ ಸಿರಿಲ್ ಡಿ ಸೋಜಾ, ವಲಯ ರಾಯಭಾರಿ ಬಾಲಕೃಷ್ಣ ಶೆಟ್ಟಿ ಪಿ, ಸ್ಥಾಪಕ ಅಧ್ಯಕ್ಷರಾದ ಗಂಗಾಧರ ರೈ, ಕ್ಲಬ್ ಕಾರ್ಯದರ್ಶಿ ರವಿ ಕಿರಣ್, ಕೋಶಾಧಿಕಾರಿ ಕೂಸಪ್ಪ ಪೂಜಾರಿ ಉಪಸ್ಥಿತರಿದ್ದರು. ಕ್ಲಬ್ ನ ಅಧ್ಯಕ್ಷರು ಸ್ವಾಗತಿಸಿದರು ಕಾರ್ಯದರ್ಶಿ ವರದಿ ಮಂಡಿಸಿದರು, ಕೋಶಾಧಿಕಾರಿ ಧನ್ಯವಾದ ಸಮರ್ಪಿಸಿದರು ಲಯನ್ ಬಾಲಕೃಷ್ಣ ಆಳ್ವಾ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

Leave a Comment