ಬಂಟ್ವಾಳ :ಪುದು ಗ್ರಾ.ಪಂ.ನಲ್ಲಿ 10 ವಾರ್ಡ್ ಗಳಲ್ಲಿ 34 ಸದಸ್ಯ ಸ್ಥಾನಗಳಿಗೆ 99 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಫೆ 25ರಂದು ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಶೇ.73.7 ಮತದಾನ ದಾಖಲಾಗಿದೆ.
ಈ ಚುನಾವಣೆಯಲ್ಲಿ ಒಟ್ಟು 65 ಸಿಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಈ ಬಾರಿ ಮತಪತ್ರದ ಮೂಲಕ ಚುನಾವಣೆ ನಡೆಡಿದ್ದು ಬೆಳಿಗ್ಗೆ
7 ರಿಂದ ಸಂಜೆ 5 ರ ತನಕ ಮತದಾನ ನಡೆಯಿತು.
ಪುದು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 13000 ಮತದಾರರು ಇದ್ದು 99 ಅಭ್ಯರ್ಥಿಗಳು ಕಣದಲ್ಲಿದ್ದರು.














