ಕಲ್ಲಡ್ಕ :ಶ್ರೀರಾಮ ಡಿಗ್ರಿ ಕಾಲೇಜಿನಲ್ಲಿ ಡಾ. ಎಸ್ ಎಲ್ ಭೈರಪ್ಪನವರಿಗೆ ನುಡಿನಮನ.

Coastal Bulletin
ಕಲ್ಲಡ್ಕ :ಶ್ರೀರಾಮ ಡಿಗ್ರಿ ಕಾಲೇಜಿನಲ್ಲಿ ಡಾ. ಎಸ್ ಎಲ್ ಭೈರಪ್ಪನವರಿಗೆ ನುಡಿನಮನ.

ಬಂಟ್ವಾಳ :ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಜ್ಞಾನ ಸಾಹಿತ್ಯ ಸಂಘ ಮತ್ತು ಕನ್ನಡ ಭಾಷಾ ವಿಭಾಗದ ವತಿಯಿಂದ ಹಿರಿಯ ಸಾಹಿತಿ ಡಾ. ಎಸ್ ಎಲ್ ಭೈರಪ್ಪನವರ ನಿಧನದ ಪ್ರಯುಕ್ತ ಸೆ. 25ರಂದು ದಾಟಿದ ಆವರಣ ಸಾಹಿತಿಗೊಂದು ನುಡಿನಮನ (ನುಡಿ ನಮನ) ಕಾರ್ಯಕ್ರಮ ನಡೆಯಿತು.

ಕಾಲೇಜು ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರಕಟ್ಟೆ ಇವರು ಡಾ. ಭೈರಪ್ಪನವರ ಕುರಿತು ಮಾತನಾಡುತ್ತಾ ಅವರ ಸಾಧನೆಯ ವಿಚಾರಗಳನ್ನು ತಿಳಿಸಿ ನುಡಿನಮನ ಸಲ್ಲಿಸಿದರು. ಮೌನ ಪ್ರಾರ್ಥನೆಯೊಂದಿಗೆ ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಾಹಿತ್ಯ ಸಂಘದ ನಿರ್ದೇಶಕಿ ಕು. ಅನನ್ಯಾ, ಸಹನಿರ್ದೇಶಕಿ ಪ್ರಸನ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸನ್ನಾ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜು ಪ್ರವೇಶ ದ್ವಾರದಲ್ಲಿ ಡಾ. ಎಸ್ ಎಲ್ ಭೈರಪ್ಪನವರ ಕೃತಿಗಳ ಪ್ರದರ್ಶಿನವನ್ನು ಏರ್ಪಡಿಸಲಾಯಿರು.

Leave a Comment