ಬಂಟ್ವಾಳ :ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇದರ ಆಶ್ರಯದಲ್ಲಿ ಅ 20ರಿಂದ 23ರ ವರೆಗೆ ನಡೆಯುವ 35ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ನೂತನ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ದೇವಿ ಪ್ರಸಾದ್ ಶೆಟ್ಟಿ ಕೊಡ್ಮಾಣ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಹರೀಶ್ ಕುಮಾರ್ ಕಲ್ಲಜಾಲ್, ಕೋಶಾಧಿಕಾರಿಯಾಗಿ ಸಂತೋಷ ಕುಮಾರ್ ಕೊಡ್ಮಾಣ್ ಹಾಗೂ ಇತರ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಸೆ. 24ರಂದು ಭಾನುವಾರ 35ನೇ ವರುಷದ ಶ್ರೀ ಶಾರದಾ ಪೂಜೆ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕೊಡ್ಮಾಣ್ ಸರಕಾರಿ ಶಾಲೆಯಲ್ಲಿ ನಡೆಯಿತು.
ಫರಂಗಿಪೇಟೆ ವ್ಯವಸಾಯ ಸಹಕಾರಿ ಸೇವಾ ಸಂಘ ಇದರ ಅಧ್ಯಕ್ಷರಾದ ಪಿ ಸುಬ್ರಮಣ್ಯ ರಾವ್ ಹೊಯ್ಗೆಗದ್ದೆ
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ ಕೊಡ್ಮಾಣ್, ವಿವೇಕ್ ಆಳ್ವ ಕೊಡ್ಮಾಣ್, ಗಂಗಾಧರ ಪೂಜಾರಿ ಅಬ್ಬೆಟ್ಟು, ಪದ್ಮನಾಭ ಶೆಟ್ಟಿ ಕೊಟ್ಟಿಂಜ. ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ, ದೇವದಾಸ್ ಕೆ ಆರ್, ಲಕ್ಷ್ಮೀಕಾಂತ್ ನಾಯಕ್ ಕೊಡ್ಮಾಣ್, ಸಹಿತ ಎಲ್ಲಾ ಪದಾಧಿಕಾರಿಗಳು ಹಾಗೂ ಮಾತೃ ಮಂಡಳಿಯ ಸದಸ್ಯೆಯರು ಉಪಸ್ಥಿತರಿದ್ದರು. ಗೋಪಾಲ್ ಗೋವಿಂದೋಟ ಸ್ವಾಗತಿಸಿದರು.















