ಜಕ್ರಿಬೆಟ್ಟು: 20ನೇ ವರ್ಷದ ಗಣೇಶೋತ್ಸವ ಆಕರ್ಷಕ ಶೋಭಾಯಾತ್ರೆಯೊಂದಿಗೆ ಸಮಾಪನ.

Coastal Bulletin
ಜಕ್ರಿಬೆಟ್ಟು: 20ನೇ ವರ್ಷದ ಗಣೇಶೋತ್ಸವ ಆಕರ್ಷಕ ಶೋಭಾಯಾತ್ರೆಯೊಂದಿಗೆ ಸಮಾಪನ.

ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟುವಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಮಂಗಳವಾರ ಆರಂಭಗೊಂಡು ಐದು ದಿನ ಪೂಜಿಸಲಾದ 20 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಶನಿವಾರ ರಾತ್ರಿ ಸಂಭ್ರಮ ಸಡಗರದಿಂದ ನಡೆದ ಆಕರ್ಷಕ ಶೋಭಾಯಾತ್ರೆಯೊಂದಿಗೆ ಸಮಾಪನಗೊಂಡಿತು.

ಪುರೋಹಿತ ಕೆ.ಸುದರ್ಶನ್ ಬಲ್ಲಾಳ್ ಮಾರ್ಗದರ್ಶನದಲ್ಲಿ ಶನಿವಾರ ಮಧ್ಯಾಹ್ನ 108 ಕಾಯಿ ಗಣಯಾಗ ಪೂಣರ್ಾಹುತಿ ಸಹಿತ ಸಂಜೆ ನೃತ್ಯ ಭಜನೆ ಮತ್ತು ಸಂಧ್ಯಾ ಪೂಜೆ ನಡೆದು ರಾತ್ರಿ ಶೋಭಾಯಾತ್ರೆ ನಡೆಯಿತು. ಜಕ್ರಿಬೆಟ್ಟು -ಬಂಟ್ವಾಳ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಮೂಲಕ ರಾತ್ರಿ ನಡೆದ ಶೋಭಾಯಾತ್ರೆಯು ಬಂಟ್ವಾಳ ಪೇಟೆ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ ಬಳಿ ನೇತ್ರಾವತಿ ನದಿಯಲ್ಲಿ ವಿಗ್ರಹ ಜಲಸ್ತಂಭನಗೊಳಿಸಲಾಯಿತು. ನೃತ್ಯ ಭಜನೆ, ಚೆಂಡೆ, ಕೊಂಬು, ವಾದ್ಯ, ನಾಸಿಕ್ ಬ್ಯಾಂಡ್ ಸಹಿತ ವಿವಿಧ ರೀತಿಯ ಸ್ತಬ್ಧಚಿತ್ರ ಶೋಭಾಯಾತ್ರೆಗೆ ಮೆರುಗು ನೀಡಿತು. ಬಂಟ್ವಾಳ ಗ್ರಾಮಾಂತರ ಮತ್ತು ನಗರ ಠಾಣೆ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದರು.


ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ

ರೈ, ಅಧ್ಯಕ್ಷ ಬಿ.ಪದ್ಮಶೆಖರ ಜೈನ್, ಪ್ರಮುಖರಾದ ಚರಿಶ್ಮಾ ಆರ್.ರೈ, ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್.ರಾಡ್ರಿಗಸ್, ಎಡ್ತೂರು ರಾಜೀವ ಶೆಟ್ಟಿ, ಎನ್.ಪ್ರಕಾಶ ಕಾರಂತ್, ಸೀತಾರಾಮ ಶೆಟ್ಟಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಜನಾರ್ದನ ಚೆಂಡ್ತಿಮಾರ್, ಜಗನ್ನಾಥ್ ತುಂಬೆ, ವಾಸು ಪೂಜಾರಿ, ಸದಾಶಿವ ಬಂಗೇರ, ಸುದರ್ಶನ್ ಜೈನ್, ಕೆ.ಮಾಯಿಲಪ್ಪ ಸಾಲ್ಯಾನ್, ಮಹಾಬಲ ಬಂಗೇರ, ಪ್ರವೀಣ ಕಿಣಿ, ಸುಭಾಶ್ಚಂದ್ರ ಶೆಟ್ಟಿ, ಪ್ರವೀಣ ಜಕ್ರಿಬೆಟ್ಟು, ಮೋಹನ ಗೌಡ ಕಲ್ಮಂಜ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ವಿಲ್ಮಾ ಮೊರಾಸ್, ನವೀನಚಂದ್ರ ಶೆಟ್ಟಿ, ಜಗದೀಶ ಕುಂದರ್, ಮಧುಸೂದನ ಶೆಣೈ, ಜಗದೀಶ ಕೊಯಿಲ, ಅಬ್ಬಾಸ್ ಆಲಿ, ಚಂದ್ರಹಾಸ ಪಲ್ಲಿಪಾಡಿ ಮತ್ತಿತರರು ಇದ್ದರು.

Leave a Comment