ಬಂಟ್ವಾಳ: ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ನೆಪದಲ್ಲಿ 150ಕ್ಕೂ ಮಿಕ್ಕಿ ಮಂದಿ ಸಾವನ್ನಪ್ಪಿ ಇಬ್ಬರು ಮಹಿಳೆಯರನ್ನು ಅಮಾನವೀಯವಾಗಿ ಅತ್ಯಾಚಾರಗೊಳಿಸಿ ಹತ್ಯೆ ಮಾಡಿದ ಘಟನೆ ದೇಶವೇ ತಲೆ ತಗ್ಗಿಸುವಂತೆ ಮಾಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಮಾತ್ರ ವಿದೇಶ ಸುತ್ತಿ ಪ್ರಚಾರ ಗಿಟ್ಟಿಕೊಂಡು ಈ ಬಗ್ಗೆ ಮೌನ ವಹಿಸಿರುವುದು ಏಕೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಪ್ರಶ್ನಿಸಿದ್ದಾರೆ.
ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಬಳಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮಣಿಪುರ ಮುಖ್ಯಮಂತ್ರಿ ರಾಜೀನಾಮೆ ನೀಡುವ ನಾಟಕ ಮಾಡಿ, ಘಟನೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಶ್ವನಿ ಕುಮಾರ್ ರೈ, ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಪದ್ಮಶೇಖರ ಜೈನ್, ಎಂ.ಎಸ್.ಮುಹಮ್ಮದ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕೆ.ಪದ್ಮನಾಭ
ರೈ, ಸದಾಶಿವ ಬಂಗೇರ, ಅಬ್ಬಾಸ್ ಆಲಿ, ಸಂಜೀವ ಪೂಜಾರಿ ಮೆಲ್ಕಾರ್, ಲವೀನಾ ವಿಲ್ಮಾ ಮೊರಾಸ್, ಜೆಸಿಂತಾ ಡಿಸೋಜ, ಐಡಾ ಸುರೇಶ್, ಮಲ್ಲಿಕಾ ವಿ.ಶೆಟ್ಟಿ, ಜಯಂತಿ ಪೂಜಾರಿ, ಫ್ಲೋಸಿ ಡಿಸೋಜ, ವನಿಲ, ಲುಕ್ಮಾನ್ ಬಂಟ್ವಾಳ, ಬಿ.ಮೋಹನ್, ಮಹಮ್ಮದ್ ನಂದರಬೆಟ್ಟು, ಪ್ರವೀಣ ಜಕ್ರಿಬೆಟ್ಟು, ಉಮೇಶ ಬೋಳಂತೂರು, ಚಿತ್ತರಂಜನ್ ಶೆಟ್ಟಿ ಬೊಂಡಲ,ಲೋಲಾಕ್ಷ ಶೆಟ್ಟಿ, ಜಗದೀಶ ಕುಂದರ್, ವೆಂಕಪ್ಪ ಪೂಜಾರಿ, ಪರಮೇಶ್ವರ ಎಂ., ಸುರೇಶ ಕುಮಾರ್ ನಾವೂರು, ಸುರೇಶ ಜೋರ, ನವಾಜ್ ಬಡಕಬೈಲು ಮತ್ತಿತರರು ಇದ್ದರು.















