ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ -ನೇತ್ರಾವತಿ ಸಂಗಮ. ಜು.28, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ *ಅಧ್ಯಯನ ತಂತ್ರ ಹಾಗೂ ಪರೀಕ್ಷಾ ಸಿದ್ಧತೆ "ಬಗ್ಗೆ ಕಾರ್ಯಾಗಾರ ಉದ್ಘಾಟನೆ.

Coastal Bulletin
ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ -ನೇತ್ರಾವತಿ ಸಂಗಮ. ಜು.28, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ *ಅಧ್ಯಯನ ತಂತ್ರ ಹಾಗೂ ಪರೀಕ್ಷಾ ಸಿದ್ಧತೆ "ಬಗ್ಗೆ ಕಾರ್ಯಾಗಾರ ಉದ್ಘಾಟನೆ.

ಬಂಟ್ವಾಳ :ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ -ನೇತ್ರಾವತಿ ಸಂಗಮ ಬಂಟ್ವಾಳ ಇದರ ಆಶ್ರಯದಲ್ಲಿ ತಾಲೂಕಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ನಿರಂತರ ನಡೆಯುವ *ಅಧ್ಯಯನ ತಂತ್ರ ಹಾಗೂ ಪರೀಕ್ಷಾ ಸಿದ್ಧತೆ" ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಜು.28 ಶುಕ್ರವಾರ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯ ಶ್ರೀ ಶಾರದಾ ಸಾಂಸ್ಕೃತಿಕ ಕಲಾ ಮಂದಿರದಲ್ಲಿ ಉದ್ಘಾಟನೆಗೊಳ್ಳಲಿದೆ.

ಕಾರ್ಯಾಗಾರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಲಿದ್ದು , ಸೀನಿಯರ್ ಛೇಂಬರ್ ಅಧ್ಯಕ್ ಡಾ.ಆನಂದ್ ಬಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. 

ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಪಿ ಪಿ ಯಫ್ ಪುರಸ್ಕಾರವನ್ನು ಶಾಲೆಯ ಸಂಚಾಲಕ, ವೈದ್ಯರಾದ ಡಾ| ವಿಶ್ವನಾಥ ನಾಯಕ್ ಇವರಿಗೆ ಪ್ರದಾನ ಮಾಡಲಾಗುವುದು.

ಅತಿಥಿಗಳಾಗಿ

ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ, ಶಾರದಾ ಪ್ರೌಢಶಶಲೆ ಕಾರ್ಯದರ್ಶಿ ಎನ್.ಶ್ರೀನಿವಾಸ ಕುಡ್ವ, ಎಸ್.ಎಲ್.ಎನ್.ಪಿ ಸಂಚಾಲಕ ಸುಬೋಧ್ ಜಿ.ಪ್ರಭು, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದಿಕ್ ಭಾಗವಹಿಸಲಿದ್ದಾರೆ ಎಂದು ಸೀನಿಯರ್ ಚೇಂಬರ್ ನ ಅಧ್ಯಕ್ಷರಾದ ಡಾ. ಆನಂದ ಬಂಜನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Leave a Comment