Coastal Bulletin

ಮಂಗಳೂರು : ಮಂಗಳೂರಿನ ಮಳಲಿ ಬಳಿ ಮಸೀದಿ ನವೀಕರಣ ವೇಳೆ ದೇವಸ್ಥಾನ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ತಾಂಬೂಲ ಪ್ರಶ್ನೆಗೆ ಇಂದು ದಿನ ನಿಗದಿಮಾಡಿತ್ತು. ಇದೀಗ ತಾಂಬೂಲ ಪ್ರಶ್ನೆಯಲ್ಲಿ‌ ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಎಂದು ತಿಳಿದು ಬಂದಿದೆ.

ಮಸೀದಿ ಜಾಗದಲ್ಲಿ ದೇವಸ್ಥಾನ ಇದ್ದದ್ದು ನಿಜ. ಇದು ದೈವ ಸಾನಿಧ್ಯ ಇದ್ದಂತಹ ಸ್ಥಳ, ತಾಂಬೂಲ ಪ್ರಶ್ನೆಯಲ್ಲಿ ಹಿಂದೂ ಧಾರ್ಮಿಕ ಸ್ಥಳ ಎಂದು ಉತ್ತರ ಬಂದಿದೆ. ಇಲ್ಲಿ

ಗುರುಪೀಠ ಇತ್ತು. ಯಾವುದೋ ಒಂದು ಕಾಲದಲ್ಲಿ ದೇವಸ್ಥಾನ ಇತ್ತೆಂದು ತಿಳಿಯುತ್ತಿದೆ. ಈಗ ಮೇಲೆದ್ದು ಬಂದಿದೆ. ವಿವಾದದಿಂದ ದೇವಸ್ಥಾನ ನಾಶವಾಗಿದೆಯೆಂದು ತಿಳಿದುಬಂದಿದೆ ಎಂದು ಜ್ಯೋತಿಷಿ ಜಿ.ವಿ. ಗೋಪಾಲಕೃಷ್ಣ ಹೇಳಿದ್ದಾರೆ.

Leave a Comment