Coastal Bulletin

ಮಂಗಳೂರು: ಸರ್ಫಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾ ಹಾಗೂ ಪ್ರವಾಸೋದ್ಯಮ ಇಲಾಖೆಯ ಪ್ರಾಯೋಜಕತ್ವದಲ್ಲಿ ಮೇ 27ರಿಂದ 29ರ ವರೆಗೆ ಪಣಂಬೂರು ಬೀಚ್ ನಲ್ಲಿ ಸರ್ಫಿಂಗ್‌ ಕ್ರೀಡೆಯನ್ನು‌ ಆಯೋಜಿಸಲಾಗಿದೆ.

ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನ್ಯಾಶನಲ್‌ ಸರ್ಫಿಂಗ್‌ ಫೆಸ್ಟಿವಲ್‌ 2022 ಕುರಿಂತಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ಅವರು ಯಾವುದೇ ಅಪಾಯಗಳು, ಅವಘಡಗಳು ಸಂಭವಿಸದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಲೈಫ್‌ ಗಾರ್ಡ್‌ಗಳು, ಆಯಂಬುಲೆನ್ಸ್‌, ಮೆಡಿಕಲ್‌ ಪರಿಕರವಿರುವ ವಾಹನ, ಜೀವರಕ್ಷಕ ಸಾಧನಗಳು, ದೋಣಿಗಳು ಸೇರಿದಂತೆ

ಅಪಾಯದಿಂದ ರಕ್ಷಿಸುವ ಕಾರ್ಯಾಚರಣೆ ಸಾಧನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ, ಸರ್ಫಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾದ ಉಪಾಧ್ಯಕ್ಷ ರಾಮ್‌ ಮೋಹನ್‌, ಸರ್ಫಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾದ ಜಂಟಿ ಕಾರ್ಯದರ್ಶಿ ಗೌರವ ಹೆಗ್ಡೆ, ಎನ್‌ಎಂಪಿಟಿಯ ಸಿವಿಲ್‌ ಎಂಜಿನಿಯರ್‌ ಶಶಿಧರ್‌ ಮುಂತಾದವರು ಉಪಸ್ಥಿತರಿದ್ದರು.

Leave a Comment