Coastal Bulletin

ಬಂಟ್ವಾಳ: ತಾಲ್ಲೂಕಿನ ಬೆಂಜನಪದವು ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪಚ್ಚಿನಡ್ಕ ಶುಭ ಬೀಡಿ ಸಂಸ್ಥೆ ಇದರ 50ನೇ ವರ್ಷ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥೆ ಮುಖ್ಯಸ್ಥ ಕೆ.ಸೇಸಪ್ಪ ಕೋಟ್ಯಾನ್ ದಂಪತಿಯನ್ನು ಸಾರ್ವಜನಿಕರು ಸನ್ಮಾನಿಸಿ ಅಭಿನಂದಿಸಿದರು.

ಸಂಸ್ಥೆಯ ಆರಂಭದಿಂದಲೂ ಜೊತೆಗಿದ್ದ 71ಮಂದಿಗೆ ಸನ್ಮಾನ,ಸಂಗೀತ ರಸಮಂಜರಿ, ತೆಲಿಕೆದ ಗೊಂಚಿಲ್, ಪಾರಂಪರಿಕ ಯಕ್ಷಕಲಾ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕಿಯೋನಿಕ್ಸ್

ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕೆ ಪಿ ಶೆಟ್ಟಿ,ಸಂಸ್ಥೆ ಪಾಲುದಾರ ಭುವನೇಶ್ ಪಚ್ಚಿನಡ್ಕ, ಉದ್ಯಮಿ ರವಿಶಂಕರ ಶೆಟ್ಟಿ ಬಡಾಜೆಗುತ್ತು, ಕಲಾವಿದ ಭೋಜರಾಜ ವಾಮಂಜೂರು, ಸತೀಶ ಬಂದಲೆ, ಜಗದೀಶ ಆಚಾರ್ಯ ಪುತ್ತೂರು ಮತ್ತಿತರರು ಇದ್ದರು.


Leave a Comment