ಬಂಟ್ವಾಳ:ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ ರಿ ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ, ಇದರ 38ನೇ ವರ್ಷದ ವಾರ್ಷಿಕ ಸವಿ ಸಂಭ್ರಮವು 26 ಎಪ್ರಿಲ್ 2025 ಶನಿವಾರ ನೆತ್ತರಕೆರೆ ಶಾಲಾ ಮೈದಾನದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 9-00ಕ್ಕೆ ಅಶ್ವತ್ಥಕಟ್ಟೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರುಗಲಿದೆ.
ಸಂಜೆ ಗಂಟೆ 6-30ರಿಂದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಕಳ್ಳಿಗೆ ನೆತ್ತರಕೆರೆ ಇಲ್ಲಿನ ಮಕ್ಕಳಿಂದ ನೃತ್ಯ ಸಿಂಚನ ಸಂಜೆ ಗಂಟೆ 7-00ರಿಂದ ಸಂಘದ ಸದಸ್ಯರು ಮತ್ತು ಮಾತೃ ಮಂಡಳಿಯ ಸದಸ್ಯೆಯರಿಂದ ಭಾರತ ದರ್ಶನ ದೃಶ್ಯರೂಪಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ
ರಾತ್ರಿ ಗಂಟೆ 8-00ಕ್ಕೆ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ಅಮೃತ್ ರೈ ಸಹ ಸಂಸ್ಥಾಪಕರು, ಕ್ರಿಯೇಟಿವ್ ಪಿ.ಯು ಕಾಲೇಜು, ಕಾರ್ಕಳ ಇವರು ವಹಿಸಳಲಿದ್ದು,ಮುಖ್ಯ ಅತಿಥಿಗಳಾಗಿ ಕಿಶೋರ್ ಕುಮಾರ್ ಪುತ್ತೂರು ವಿಧಾನ ಪರಿಷತ್ ಸದಸ್ಯರು
ಸತೀಶ್ ನಾಯ್ಕ ಕೊಡಾಣ್‌ಕೋಡಿ ಅಧ್ಯಕ್ಷರು,
ಗ್ರಾಮ ಪಂಚಾಯತ್, ಮೇರಮಜಲು ಉಪಸ್ಥಿತರಿದ್ದು, ಕರ್ನಾಟಕ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ರವೀಂದ್ರ ಕಂಬಳಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಲಾ ಪೋಷಕ ಸದಾಶಿವ ಡಿ. ತುಂಬೆ ಇವರು ಸನ್ಮಾನಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಕೊಡ್ಯಾಣ್ ಕಾಂತಪ್ಪ ಶೆಟ್ಟಿ ಪ್ರತಿಭಾ ಪುರಸ್ಕಾರ ಹಾಗೂ,ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದಲ್ಲಿ ಪ್ರಥಮ, ದ್ವಿತೀಯ, ತೃತಿಯ ಸ್ಥಾನವನ್ನು ಪಡೆದು ಅತ್ಯುನ್ನತ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಗೌರವ ಅಭಿನಂದನೆ ನಡೆಯಲಿದೆ.
ಬಳಿಕ ಸಂಘದ ಹಾಗೂ ಅತಿಥಿ ಕಲಾವಿದರ ಅಭಿನಯದ "ಮದಿಮೆದ ಇಲ್ಲಡ್" ಎಂಬ ತುಳು ನಾಟಕ ಪ್ರದರ್ಶನ ಗೊಳ್ಳಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














