ಬಂಟ್ವಾಳ, ಎ. 24: ಕಾಶ್ಮೀರದಲ್ಲಿ ಉಗ್ರರ ಬೀಕರ ದಾಳಿಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ವಿವಿಧ ಹಿಂದೂಪರ ಸಂಘಟನೆಗಳ ಸಹಯೋಗದಲ್ಲಿ ಎ. 24ರಂದು ಗುರುವಾರ ಸಂಜೆ ಬಿ.ಸಿ. ರೋಡಿನ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ಮೃತಪಟ್ಟ ಅಮಾಯಕರಿಗೆ ಶ್ರದ್ದಾಂಜಲಿ ಅರ್ಪಿಸಿ ಹಣತೆಯನ್ನು ಬೆಳಗಿಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ಮಾತನಾಡಿ,ಪ್ರತಿಯೊಬ್ಬ ಭಾರತೀಯನೂ ಖಂಡಿಸಬೇಕಾದ ಘಟನೆ ಕಾಶ್ಮೀರದಲ್ಲಿ ನಡೆದಿದೆ, ಇಡೀ ದೇಶವೇ ತಲೆ ತಗ್ಗಿಸುವ ಕೃತ್ಯ ಭಯೋತ್ಪಾದಕ ರಿಂದ ನಡೆದಿದೆ, ಇಂತಹ ಭಯೋತ್ಪಾದನೆ ಪೂರ್ತಿ ನಿರ್ಮೂಲನೆಯಾಗುವವರೆಗೂ ಹೋರಾಟ ಸಾಗಬೇಕಿದೆ. ಇದರ ವಿರುದ್ಧ ಪ್ರಧಾನಿ ಮೋದಿಯವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ಉಗ್ರರಿಗೆ ತಕ್ಕ ಪಾಠ ಕಲಿಸುವ ವಿಶ್ವಾಸವಿದೆ ಎಂದರು.
ಬಂಟ್ವಾಳ ವಿಹಿಂಪ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಮಾತನಾಡಿ, ಕೇವಲ ಹಿಂದೂಗಳಾಗಿದ್ದಾರೆ ಎನ್ನುವ ಮಾತ್ರಕ್ಕೆ ಅಮಾಯಕರನ್ನು ಹತ್ಯೆ ಮಾಡಲಾಗಿದೆ. ಇದೊಂದು ಹೇಯ ಕೃತ್ಯ ಎಂದರು.
ಹಿಂಜಾವೇ
ಮುಂದಾಳು ನರಸಿಂಹ ಮಾಣಿ, ಉಗ್ರರಿಗೆ ತಕ್ಕ ಪಾಠ ಕಲಿಸಿ ಇಂಥ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್,
ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ ಪುರಸಭಾ ಸದಸ್ಯ ಗೋವಿಂದ ಪ್ರಭು, ಪ್ರಮುಖರಾದ ರಾಧಾಕೃಷ್ಣಅಡ್ಯಂತಾಯ, ರಾಮದಾಸ್ ಬಂಟ್ವಾಳ, ದಿನೇಶ್ ಅಮ್ಮೂರು, ತಿರುಲೇಶ್ ಬೆಳ್ಳೂರು, ಪ್ರಶಾಂತ್ ಕೆಂಪುಗುಡ್ಡೆ, ಭರತ್ ಕುಮ್ಡೆಲ್, ಯಶೋಧರ ಕರ್ಬೇಟ್ಟು ಸುಲೋಚನಾ ಜಿ.ಕೆ. ಭಟ್, ರೇಷ್ಮಾಶಂಕರಿ, ಲಖಿತಾ ಆರ್. ಶೆಟ್ಟಿ ಮೊದಲಾದವರಿದ್ದರು. ಹಿಂಜಾವೇ ಮುಂದಾಳು ಸಮಿತ್‌ರಾಜ್ ಧರೆಗುಡ್ಡೆ ನಿರ್ವಹಿಸಿದರು.














