Coastal Bulletin

ಬಂಟ್ವಾಳ :ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇಲ್ಲಿಯ ರೆಡ್ ರಿಬ್ಬನ್ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಎಚ್.ಐ.ವಿ ಜಾಗೃತಿ ಹಾಗೂ ರಕ್ತದಾನದ ಮಹತ್ವ ಅವಶ್ಯಕತೆಗಳು ಎಂಬ ಒಂದು ದಿನದ ಕಾರ್ಯಗಾರ ಫೆ.25ರಂದು ಶನಿವಾರ ಸಾಧನಾ ಸಭಾಭವನದಲ್ಲಿ ನಡೆಯಿತು.

ಶ್ರೀರಾಮ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿಯಾದ ಶ್ರೀಮತಿ ಶೈಲಿನಿ ಇವರು ಎಚ್.ಐ.ವಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತಾಡುತ್ತಾ ಏಡ್ಸ್ನ ಗುಣಲಕ್ಷಣಗಳು ಮತ್ತು ಆರೋಗ್ಯ ವ್ಯವಹಾರದಲ್ಲಿ ವಹಿಸಬೇಕಾದ ಎಚ್ಚರಿಕೆಗಳು ಮತ್ತು ಎಚ್.ಐ.ವಿ ಬಾಧಿತರಿಗೆ ಸಹಾಯ ಮತ್ತು ಮನೋಸ್ಥೈರ್ಯವನ್ನು ವೃದ್ಧಿಸುವ ಬಗೆಯನ್ನು ತಿಳಿಸಿದರು. ಮತ್ತು ರಕ್ತದಾನ ಮಾಡುವುದರಿಂದ ಆಗುವಂತಹ ಸಾಮಾಜಿಕ ಒಳಿತುಗಳು ಹಾಗೂ ವೈಯಕ್ತಿಕ ಲಾಭಗಳ

ಬಗೆಗೆ ವಿದ್ಯಾರ್ಥಿಗಳಲ್ಲಿ ಸಂವಾದದ ಮೂಲಕ ಚರ್ಚೆಯನ್ನು ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ ಕಾಯರ್ಕಟ್ಟೆ ಇವರು ವಹಿಸಿದರು. ಮತ್ತು ರಾ.ಸೇ.ಯೋಜನೆಯ ಯೋಜನಾಧಿಕಾರಿಯಾದ ಶ್ರೀ ಯತಿರಾಜ್ ಪಿ. ರೆಡ್ಕ್ರಾಸ್ ಘಟಕ ಸಂಯೋಜಕರಾದ ಕು ಚಂದ್ರಕಲಾ ಇವರು ಉಪಸ್ಥಿತರಿದ್ದರು. ಮತ್ತು ರೆಡ್ ರಿಬ್ಬನ್ ಕ್ಲಬ್ನ ವತಿಯಿಂದ ನಡೆದ ಸ್ಪರ್ಧೆಗಳ ವಿಜೇತರನ್ನು ಅಭಿನಂದಿಸಲಾಯಿತು.

Leave a Comment