Coastal Bulletin

ಬಂಟ್ವಾಳ :ತಾಲೂಕಿನ ವೀರಕಂಬ ಗ್ರಾಮದ ಯುವ ಕೇಸರಿ ಫ್ರೆಂಡ್ಸ್ ಅರೆಬೆಟ್ಟು ಎರ್ಮೆಮಜಲು (ರಿ) ಇದರ ವತಿಯಿಂದ ಎರ್ಮೆಮಜಲು ಜಂಕ್ಷನ್ನಲ್ಲಿ ನಿರ್ಮಾಣವಾದ "ಯುವ ಕೇಸರಿ ಭವನ" ದ ಲೋಕಾರ್ಪಣ ಕಾರ್ಯಕ್ರಮ ಫೆ.27ಸೋಮವಾರ ನಡೆಯಲಿದ್ದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ದ್ವೀಪ ಪ್ರಜ್ವಲನೆ ಮಾಡುವ ಮೂಲಕ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕುಣಿತ ಭಜನೆ ಹಾಗೂ ಅನ್ನ ಸಂತರ್ಪಣದ

ಕಾರ್ಯಕ್ರಮ ಜರಗಲಿರುವುದು. ಎಂದು ಕೇಸರಿ ಫ್ರೆಂಡ್ಸ್ ಅರೆಬೆಟ್ಟು ಎರ್ಮೆಮಜಲು (ರಿ) ಇದರ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Comment