ಮಂಗಳೂರು: ಛಲವಿದ್ದರೆ ಏನಾನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆ ಈ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಅಮೈ ನಿಮಾಸಿ ಮಹಾಲಿಂಗ ನಾಯ್ಕ. ಏಕಾಂಗಿಯಾಗಿ ಏಳು ಸುರಂಗ ಕೊರೆದು ಬೋಳು ಗುಡ್ಡೆಯನ್ನು ನಂದನವನ ಮಾಡಿದ ಹೆಗ್ಗಳಿಕೆ ಇವರದ್ದು.ಇದೀಗ ಮಹಾಲಿಂಗ ನಾಯ್ಕರವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರನ್ನು ಪ್ರೊ.ಬಾಲಕೃಷ್ಣ ಗಟ್ಟಿ, ಡಾ.ವಸಂತ ಕುಮಾರ್ ಪೆರ್ಲ ಮತ್ತು ಡಾ.ನಾಗವೇಣಿ ಮಂಚಿ ನೇತೃತ್ವದ ಆಯ್ಕೆ ಸಮಿತಿಯು 2018ನೇ ವರ್ಷದ ಮಂಗಳೂರು ಪ್ರೆಸ್ ಕ್ಲಬ್ ಪುರಸ್ಕಾರಕ್ಕೆ ಆಯ್ಕೆ ಮಾಡಿತ್ತು.
ಕೃಷಿ ಕೂಲಿಕರಾಗಿದ್ದ ಮಹಾಲಿಂಗ ನಾಯ್ಕ ಸ್ವಂತ ಊರಿನಲ್ಲಿ ತೋಟದ ಕೆಲಸ ಮಾಡಿ ಜೀವನ ಮಾಡುತ್ತಿದ್ದ ಇವರಿಗೆ ಸ್ವಂತವಾಗಿ ಕೃಷಿ ಮಾಡುವ ಹಂಬಲವಿತ್ತು. ಆದರೆ ಅವರಲ್ಲಿ ಜಮೀನು ಇರಲ್ಲಿಲ್ಲ.ಊರಿನ ಭೂ ಮಾಲೀಕರಾದ ಮಹಾಬಲ ಭಟ್ ಮಹಾಲಿಂಗ ನಾಯ್ಕರಿಗೆ ಎರಡು ಎಕರೆ ಜಮೀನು ನೀಡಲು ಒಪ್ಪಿಕೊಂಡರು. ಆ ಜಾಗದಲ್ಲಿ
ಸಣ್ಣದಾಗಿ ಒಂದು ಸೂರು ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಇವರಿಗೆ ನೀರಿನ ಕೊರತೆ ಇತ್ತು. ನೀರಿಗಾಗಿ ಬಾವಿ ತೋಡುವುದು ಅಸಾಧ್ಯ ಅಂದುಕೊಂಡ ಇವರು ದಿನ ಕೂಲಿ ಕೆಲಸ ಮಾಡಿ ಉಳಿದ ಸಮಯದಲ್ಲಿ ಸುರಂಗ ಕೊರೆಯಲು ಪ್ರಯತ್ನ ಮಾಡಿದರು.
ಆರನೇ ಸುರಂಗದಲ್ಲಿ ಕೊಂಚ ನೀರು ಸಿಕ್ಕ ಇವರಿಗೆ ಕೃಷಿಯ ಅಗತ್ಯತೆಗೆ ಜಾಸ್ತಿ ನೀರು ಬೇಕಾದರಿಂದ ಏಳನೇ ಸುರಂಗ ಕೊರೆಯಲು ಶುರುಮಾಡಿದರು.ಅದರ ಫಲವಾಗಿ ತುಂಬಾನೇ ಜೀವಜಲ ದೊರಕಿತ್ತು. ನಂತರ ಜಾಗವನ್ನು ಸಮತಟ್ಟು ಮಾಡಿ ತೆಂಗು,ಭತ್ತ,ಬಾಳೆ ಕೃಷಿ ಮಾಡಿ,ಜೀವನದಲ್ಲಿ ಸೈ ಎನಿಸಿಕೊಂಡಿದ್ದಾರೆ.














