Coastal Bulletin

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆರೋಗ್ಯ ಅರಿವು ಜಾನಪದ ಬೀದಿನಾಟಕ ಕಾರ್ಯಕ್ರಮ ಬಿ.ಸಿ.ರೋಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಮೂಡದಲ್ಲಿ ಮಂಗಳವಾರ ನಡೆಯಿತು.

ಮೌನೇಶ ವಿಶ್ವಕರ್ಮ ನೇತೃತ್ವದ ಸಂಸಾರ ಜೋಡುಮಾರ್ಗ ತಂಡದಿಂದ ನಡೆದ ಕಾರ್ಯಕ್ರಮವನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಅಶ್ವಿನಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಪ್ರತಿ ಶಾಲೆಗಳಲ್ಲೂ ನಡೆಸಲಾಗುತ್ತಿದ್ದು, ಮಕ್ಕಳ ಮೂಲಕ ಮನೆಯವರಿಗೆ ಇದರ ಸಂದೇಶ ತಲುಪುತ್ತದೆ ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಶಿಕ್ಷಣ ಇಲಾಖೆಯ ಕ್ಲಸ್ಟರ್ ಕೇಂದ್ರ

ಮುಖ್ಯಸ್ಥೆ ಉಷಾ ಆರ್. ಸುವರ್ಣ, ಶಾಲಾ ಮುಖ್ಯೋಪಾಧ್ಯಾಯಿನಿ ಕುಶಲಾ ಕೆ., ಶಿಕ್ಷಕರಾದ ನವೀನ್ ಪಿ.ಎಸ್, ಸುಶೀಲಾ, ಹೇಮಾವತಿ, ಪೂರ್ಣಿಮಾ, ನಿಶ್ಮಿತಾ, ಆರೋಗ್ಯ ಇಲಾಖೆಯ ಸಿಬಂದಿಯಾದ ನಮಿತಾ, ಪ್ರತಿಮಾ, ಲಾವಣ್ಯ, ಮೀನಾಕ್ಷಿ, ಕಾರ್ಯನಿರತ ಪತ್ರಕರ್ತರ ತಾಲೂಕು ಸಂಘದ ಉಪಾಧ್ಯಕ್ಷ ಯಾದವ್ ಅಗ್ರಬೈಲ್, ಪೋಷಕರಾದ ದೇವದಾಸ್ ಉಪಸ್ಥಿತರಿದ್ದರು.

ಸಂಸಾರ ತಂಡದ ಕಲಾವಿದರಾದ ರಮೇಶ್.ಕೆ.ಪುಣಚ, ಭವಾನಿ ಪುತ್ತೂರು, ಜೋಸ್ಲಿನ್ ಪಿಂಟೊ, ಪೃಥ್ವಿರಾಜ್ ಕಲ್ಲಡ್ಕ, ಶಿವಪ್ರಸಾದ್, ಸಾತ್ವಿಕ್ ಬೆಡೇಕರ್ ಕಾರ್ಯಕ್ರಮ ನೀಡಿದರು.

Leave a Comment