ಬಂಟ್ವಾಳ :ತಾಲೂಕಿನ ಪುದು ಗ್ರಾಮದ ನಡುಬೈಲು ಎಂಬಲ್ಲಿ "ಕಲಾ ಸಂಗಮ" ಸಂಸ್ಥೆಯ 31ನೇ ವಾರ್ಷಿಕೋತ್ಸವವು ಜ.12ರಂದು ಹೊಯ್ಗೆಗದ್ದೆ ಶ್ರೀ ರಾಮ ಮಂದಿರದ ವಠಾರದಲ್ಲಿ ನಡೆಯಲಿದೆ.
ವಾರ್ಷಿಕೋತ್ಸವದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿ ಇವರಿಂದ "ಜೈ ಶ್ರೀ ರಾಮ"ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ಅಂದು ಅಪರಾಹ್ನ ಗಂಟೆ 3-00ಕ್ಕೆ ನಡುಬೈಲು ದಿ| ಕೃಷ್ಣ ಭಟ್‌ರವರ ಮನೆಯಿಂದ ಚೌಕಿಗೆ ಮೇಳದ ದೇವರ ಮೆರವಣಿಗೆ,ನಂತರ
ಶ್ರೀ ರಾಮ ಭಜನಾ ಮಂದಿರ,ಹೊಯ್ಗೆಗದ್ದೆ ಇವರಿಂದ ಭಜನೆ, 3-30ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ಸಂಜೆ ಗಂಟೆ 5-30ಕ್ಕೆ ಚೌಕಿಯಲ್ಲಿ ದೇವರ ಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 8-00ರಿಂದ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಸಮಿತಿಯ ಪ್ರಮುಖರಾದ ಸುರೇಶ ಪೂಜಾರಿ ನಡುಬೈಲು, ಶೇಕರ ಪೂಜಾರಿ, ಚೇತನ್ ಅಂಚನ್ ನಡುಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















