ಬಂಟ್ವಾಳ ತಾಲೂಕು ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಮುಂದಿನ 5 ವರ್ಷದ ಅವಧಿಗೆ 13 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಶ್ರೀಮತಿ ಮಲ್ಲಿಕಾ ವಿ ಶೆಟ್ಟಿ ಸತತ ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ರಾಯನ್ ಸಚಿನ್ ರೋಡ್ರಿಗಸ್ ಆಯ್ಕೆಯಾಗಿದ್ದಾರೆ.
ಸಂಘದ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು ಮಂಗಳೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಆದಿಕ್ಷಕ ಕೆ ನಾಗೇಂದ್ರರವರು ಚುನಾವಣಾ ಪ್ರಕ್ರಿಯೆ ನಡೆಸಿದರು, ಸಂಘದ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಕುಮಾರ್ ಅಜಿಲ ಉಪಸ್ಥಿತರಿದ್ದರು.
ನಿರ್ದೇಶಕರಾಗಿ ನರಸಿಂಹ ಹೊಳ್ಳ ಹೊಳ್ಳರಬೈಲು ಆಲ್ವಿನ್ ವಿನಯ್ ಲೋಬೊ ಕಿನ್ನಿಬೆಟ್ಟು,ಕಮಲಾಕ್ಷ ಅಮ್ಟಾಡಿ, ವೀಣಾ ಡಿಸೋಜಾ ಬಾಂಬಿಲ, ತುಕಾರಾಮ ಉದಲೆ ಕೊಡಿ, ಕಮಲ ಕೆಂಪುಗುಡ್ಡೆ ಯಶವಂತ ಅಡಪ ಕುರಿಯಾಳ, ಎಡ್ವರ್ಡ್ ಆಲ್ವಿನ್ ಪೆರ್ನಾಂಡಿಸ್ ಪೆದಮಲೆ, ಹರೀಶ್ ಶೆಟ್ಟಿ ಪಡು, ಬಬಿತಾ ಕೋಟ್ಯಾನ್ ಅಮ್ಟಾಡಿ, ರೋಷನ್ ಪಿಂಟೋ ಮೂವ ಆಯ್ಕೆಯಾಗಿದ್ದಾರೆ















