ಫರಂಗಿಪೇಟೆ: ಶಾರದಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ. ಮಹೋತ್ಸವಗಳು ಸಂಸೃತಿಯ ಪ್ರತೀಕ ವಾಗಿರಬೇಕು : ಡಾ ಅರುಣ್ ಉಳ್ಳಾಲ್.

Coastal Bulletin
ಫರಂಗಿಪೇಟೆ: ಶಾರದಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ. ಮಹೋತ್ಸವಗಳು ಸಂಸೃತಿಯ ಪ್ರತೀಕ ವಾಗಿರಬೇಕು : ಡಾ ಅರುಣ್ ಉಳ್ಳಾಲ್.

ಬಂಟ್ವಾಳ :ಮಹೋತ್ಸವಗಳು ಸಂಸ್ಕೃತಿಯ ಪ್ರತೀಕವಾಗಿರಬೇಕು ,ಹಬ್ಬದ ಆಚರಣೆಗಳ ಬಗ್ಗೆ ತಿಳಿದು ಮುಂದಿನ ಜನಾಂಗಕ್ಕೆ ತಿಳಿಸುವಷ್ಟರ ಮಟ್ಟಿಗೆ ನಾವು ಜ್ಞಾನ ಹೊಂದಿರಬೇಕು ಹಾಗಾದಾಗ ನಮ್ಮ ಸಂಸ್ಕಾರ , ಸಂಸೃತಿ ಗಳು ಉಳಿಸಲು ಸಾಧ್ಯ ಎಂದು ಡಾ ಅರುಣ್ ಉಳ್ಳಾಲ್ ರವರು ಫರಂಗಿಪೇಟೆ ಸಹೋದರ ಸೇವಾ ಸಂಘ ದ ಆಶ್ರಯದಲ್ಲಿ ನಡೆಯುವ ೩೪ ನೇ ವರ್ಷದ ಫರಂಗಿಪೇಟೆ ಶಾರದಾ ಮಹೋತ್ಸವ ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಶ್ರೀರಾಮ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಯವರ ಅಧ್ಯಕ್ಷತೆ ವಹಿಸಿಕೊಂಡಿದ್ದರು ವೇದಿಕೆಯಲ್ಲಿ ಕ್ಯಾಪ್ಟನ್ ಬೃಜೇಶ್ ಚೌಟ , ಜ್ಯೋತಿಷಿ ಅನಿಲ್ ಪಂಡಿತ್ , ಉದ್ಯಮಿಗಳಾದ ಭುವನೇಶ್ , ಉಪನ್ಯಾಸಕರಾದ ರೇಷ್ಮಾ , ಫರಂಗಿಪೇಟೆ ಶಾರದಾ ಮಹೋತ್ಸವ ದ ಅಧ್ಯಕ್ಷರಾದ ಸುಕುಮಾರ್ ಕೊಪ್ಪಳ , ಕಾರ್ಯದರ್ಶಿ ಅನಿಶ್ , ಕೋಶಾಧಿಕಾರಿ ತಿಲಕ್ ರಾಜ್

, ಸಹೋದರ ಸೇವಾ ಸಂಘದ ಅಧ್ಯಕ್ಷರಾದ ಮಂಟಮೆ ದಿನಕರ ಕರ್ಕೇರ , ಕಾರ್ಯದರ್ಶಿ ಬಿ . ಜಗದೀಶ್ ಅರ್ಕುಳ , ಉಪಸ್ಥಿತರಿದ್ದರು , ಈ ಸಂದರ್ಭ ಶಿಕ್ಷಣ ದಲ್ಲಿ ಸಾಧನೆ ಗೈದ ಐದು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಆರ್ಥಿಕ ವಾಗಿ ಅಶಕ್ತಇಬ್ಬರಿಗೆ ದನ ಸಹಾಯ ನೀಡಲಾಯಿತು 

ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿ ಪ್ರಾಸ್ತಾವಿಸಿದರು , ನಿತೇಶ್ ಧರ್ಮಗಿರಿ ವಂದಿಸಿದರು

Leave a Comment