ಬಂಟ್ವಾಳ :ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಬ್ರಹ್ಮಗಿರಿ ಗೋವಿನ ತೋಟ ಪುದು ಇಲ್ಲಿ ನಡೆಯುವ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ, ಮಹಾಯಜ್ಞ ಹಾಗೂ ಗೋ ನವರಾತ್ರಿ ಉತ್ಸವದ ಪೂರ್ವಭಾವಿಯಾಗಿ ದ ಕ, ಉಡುಪಿ, ಕೊಡಗು ಜಿಲ್ಲೆಯದ್ಯಂತ ಹೊರಡುವ ಗೋ ರಥಯಾತ್ರೆಯ ಉದ್ಘಾಟನಾ ಮಹೋತ್ಸವಕ್ಕೆ ಸೆ.24ರಂದು ಭಾನುವಾರ ರಾಧಾ ಸುರಭಿ ಗೋ ಮಂದಿರ ಬ್ರಹ್ಮಗಿರಿ ಗೋವಿನ ತೋಟದಲ್ಲಿ ಚಾಲನೆ ನೀಡಲಾಯಿತು.
ಗೋ ರಥ ಯಾತ್ರೆಯ ಉದ್ದೇಶದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದ ಭಕ್ತಿ ಭೂಷಣ್ ದಾಸ್ ಪ್ರಭುಜಿ, ಗೋ ಸಂತತಿ ಉಳಿದರೆ ಮಾನವ ಜನ್ಮ ಉಳಿಯುತ್ತದೆ, ಧರ್ಮ ಉಳಿಯುತ್ತದೆ, ಧರ್ಮ ಉಳಿದರೆ ರಾಷ್ಟ್ರ ಉಳಿಯುತ್ತದೆ ಎಂದರು.ಗೋ ಪಾಲನೆ ಮಾಡುದರೊಂದಿಗೆ ,ಗೋ ಉತ್ಪನ್ನ ಬಳಸುದರೊಂದಿಗೆ ಮನುಷ್ಯ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಈ ಎಲ್ಲಾ ಉದ್ದೇಶದಿಂದ ಗೋ ರಥಯಾತ್ರೆ ನಡೆಸಲಾಗುತ್ತದೆ ಎಂದರು.
ಇಸ್ಕಾನ್ ಮುಂಬೈ ಅಧ್ಯಕ್ಷರಾದ ಶ್ರೀ ಕಮಲ್ ಲೋಚನ್ ಪ್ರಭುಜಿ ಸಂಕಲ್ಪ ದೀಕ್ಷೆ ನೀಡಿ, ಗೋ ಮಾತೆ ವಿಶ್ವ ಮಾತೆ, ಗೋ ಮಾತೆ ಎನ್ನುವ ಶ್ರದ್ದೆ ಭಕ್ತಿ ನಮ್ಮಲ್ಲಿರಬೇಕು. ಗೋ ಜನ್ಮ ಶ್ರೇಷ್ಠ, ಗೋ ವನ್ನು ಪೋಜಿಸಿದರೆ,ಪ್ರೀತಿಸಿದರೆ, ಶ್ರೀ ಕೃಷ್ಣನ ಪ್ರೀತಿ ಸಿಗುತ್ತದೆ, ಕೃಷ್ಣನ ಪ್ರೀತಿ ನಮಗೆ ಪ್ರಾಪ್ತಿಯದರೆ ನಮ್ಮ ಬುದ್ದಿ ಸರಿಯಾಗುತ್ತೆ ಹಾಗೆ ನಮ್ಮ ಮಕ್ಕಳು ಸಂಸ್ಕಾರಯುತವಾಗಿ ಬದುಕುತ್ತಾರೆ. ನಾವು ಗೋ ಉತ್ಪನ್ನಗಳ್ಳನ್ನೇ ಉಪಯುಗಿಸುವ ಎಂದು ಗೋ ದೀಕ್ಷೆ ತೆಗೊಳ್ಳುವ ಎಂದು
ಹೇಳಿದರು,ಕೃಷ್ಣ ನಾಮದ ಸಂಕೀರ್ತನೆ ಮಾಡುದರಿಂದ ಗೋ ರಕ್ಷಣೆಯ ಕಾರ್ಯಕ್ಕೆ ನಮಗೆ ಶಕ್ತಿ ಸಿಗುತ್ತದೆ ಆದ್ದರಿಂದ ಗೋ ಮಾತೆಯನ್ನು ಪೂಜಿಸಿದರೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಡುಪು ಇಸ್ಕಾನ್ ಅಧ್ಯಕ್ಷರಾದ ಶ್ರೀರಾಮ್ ಪ್ರಭುಜಿ,ಶ್ರೀವತ್ಸ ಪ್ರಭುಜಿ, ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಮಿತಿ ಅಧ್ಯಕ್ಷರಾದ ಬ್ರಿಜೇಶ್ ಚೌಟ ಗೌರವಾಧ್ಯಕ್ಷ ಐತಪ್ಪ ಆಳ್ವ, ಗೋ ಸೇವಾ ಗತಿ ವಿಧಿಯ ಸಂಚಾಲಕ ಪ್ರವೀಣ್ ಸರಳಾಯ,ಶೋಭಾ ಮಯ್ಯ ಮಾತಾಜಿ,ಶ್ರೀರಾಮ ದಾಸ್ ಪ್ರಭುಜಿ ಉಪಸ್ಥಿತರಿದ್ದರು.
ಪ್ರಮುಖರಾದ ಕೃಷ್ಣ ಕುಮಾರ್ ಪೂಂಜಾ ಫರಂಗಿಪೇಟೆ, ರಾಮದಾಸ್ ಬಂಟ್ವಾಳ, ಪ್ರಸಾದ್ ಕುಮಾರ್ ಬಿ ಸಿ ರೋಡ್,ಪದ್ಮನಾಭ ಶೆಟ್ಟಿ ಪುಂಚಮೆ, ದಾಮೋದರ ನೆತ್ತರಕೆರೆ,ವಸಂತಿ ಎಲ್ ಶೆಟ್ಟಿ, ಅನಿಲ್ ಪಂಡಿತ್,ಮನೋಜ್ ಆಚಾರ್ಯ ನಾಣ್ಯ ಗಿರೀಶ್ ಶೆಟ್ರಿ ಕುಂಪನ ಮಜಲು,ವಿನಯ್ ಕುಮಾರ್, ನವೀನ್ ಚಾಪೆ, ರಥ ಯಾತ್ರೆಯ ಸಂಚಾಲಕರಾದ ನವೀನ್ ಮಾರ್ಲ ಗಂಗಾಧರ ಪೆರ್ಮನ್ಕಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಧ್ಯಕ್ಷರಾದ ತಾರಾನಾಥ ಕೊಟ್ಟಾರಿ ತೇವು ಸ್ವಾಗತಿಸಿ, ಧನ್ಯವಾದವಿತ್ತು ಕಾರ್ಯಕ್ರಮ ನಿರೂಪಿಸಿದರು.















