Coastal Bulletin

ಬಂಟ್ವಾಳ: ಯಕ್ಷಕಲಾ ಪೊಳಲಿ ಇದರ 27ನೇ ವರ್ಧ್ಯಂತ್ಯುತ್ಸವದ ಅಂಗವಾಗಿ ಪೊಳಲಿ ಯಕ್ಸೋತ್ಸವ 2022 ಅ.1ರಂದು ಶನಿವಾರ ಸಂಜೆ 6ರಿಂದ ಮರುದಿನ ಬೆಳಿಗ್ಗೆ 6ರವರೆಗೆ ಶ್ರೀ ಕ್ಷೇತ್ರ ಪೊಳಲಿಯ ರಾಜಾಂಗಣದಲ್ಲಿ ನಡೆಯಲಿದೆ.

ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಕಲಾಸೇವೆಯನ್ನು ಗೈದಿರುವ ಈ ಸಂಸ್ಥೆಯು ಕಳೆದ 26 ವರ್ಷಗಳಿಂದ 26 ಯಕ್ಷಗಾನ ಬಯಲಾಟ ಗಾನವೈಭವ ತಾಳಮದ್ದಳೆ, ಕೀರ್ತಿಶೇಷ ಕಲಾವಿದರ ಸಂಸ್ಮತಣೆ, ಸಾಧಕರಿಗೆ ಗೌರವಾರ್ಪಣೆ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 150 ಕಲಾವಿದರ ಸನ್ಮಾನ ಹೀಗೆ ಮೊದಲಾದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದೆ.

27ನೇ ವರ್ಧ್ಯಂತ್ಯುತ್ಸವದಲ್ಲಿ ಕೀರ್ತಿಶೇಷ ಪ್ರಸಾದ್ ಭಟ್,ಮಳಿಯಾಳ ಭೀಮ ಭಟ್, ಬೆಳ್ಳಾರೆ ವಿಶ್ವನಾಥ ರೈ, ತೋಡಿಕಾನ ವಿಶ್ವನಾಥ ಗೌಡ, ಇವರ ಸಂಸ್ಮರಣೆ ಅಂಬುರಾಹ ಯಕ್ಷ ಸದನ ಪ್ರತಿಷ್ಠಾನ ಬೊಟ್ಟಿಕೆರೆ ಇವರಿಗೆ

ಗೌರವರ್ಪಣೆ ಹಾಗೂ ಸತ್ಯನಾರಾಯಣ ಪುಣಿಚಿತ್ತಾಯ ,ಕರುಣಾಕರ ಶೆಟ್ಟಿಗಾರ್ ಕಾಶಿಪಟ್ನ, ಪೊಳಲಿ ದಿವಾಕರ ಆಚಾರ್ಯ, ಸುಬ್ರಹ್ಮಣ್ಯ ಶಾಸ್ತ್ರೀ ಮಣಿ ಮುಂಡ, ಲಕ್ಷ್ಮಣ ಕೋಟ್ಯಾನ್ ಪೆರಾರ, ಶ್ರೀಮತಿ ವಿದ್ಯಾ ಕೋಳ್ಯಾರು ಇವರೆಲ್ಲರಿಗೂ ಸನ್ಮಾನ ಜರಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ವತಿಯಿಂದ ದಕ್ಷ ಯಜ್ಞ,ಮಾನಿಷಾದ ಯಕ್ಷಗಾನ ಬಯಲಾಟ ನಡೆಯಲಿದೆ. 

ಈ ಕಾರ್ಯಕ್ರಮವು ನಮ್ಮ ಕುಡ್ಲ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ ಎಂದು‌ ಸಂಸ್ಥೆಯ ಸಂಚಾಲಕ ವೆಂಕಟೇಶ್ ನಾವಡ ಪೊಳಲಿ, ಸಂಸ್ಥಾಪಕ, ಅ.ನ.ಭ ಪೊಳಲಿ ಹಾಗೂ ಸಂಯೋಜಕ ಬಿ. ಜನಾರ್ಧನ ಅಮ್ಮುಂಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Leave a Comment