Coastal Bulletin

ವಿಟ್ಲ: ಪಿಕಪ್ ವಾಹನವೊಂದು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಯುವ ಗಾಯಕ, ಬಿಜೆಪಿ ಕಾರ್ಯಕರ್ತ ಸ್ಥಳದಲ್ಲಿ ಯೇ ಮೃತಪಟ್ಟ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಕೇಪುವಿನಲ್ಲಿ ನಡೆದಿದೆ. ಬದಿಯಡ್ಕ ನಿವಾಸಿ ಸಂದೇಶ್ (33) ಮೃತ ದುರ್ಧೈವಿ ಯುವಕ.

ಸಂದೇಶ್ ವೃತ್ತಿಯಲ್ಲಿ ವಾಹನ ಚಾಲಕನಾಗಿದ್ದು,ಹವ್ಯಾಸಿ ಗಾಯಕನಾಗಿ ಯೂ ಮಿಂಚುತ್ತಿದ್ದ ಯುವಕ. ಬಿಜೆಪಿ ಕಾರ್ಯಕರ್ತನಾಗಿ ಗುರುತಿಸಿ ಕೊಂಡಿದ್ದ ಈತ ಇಂದು ಮಧ್ಯಾಹ್ನ ಅಂದಾಜು ಮೂರು ಗಂಟೆಯ ವೇಳೆಗೆ ವಿಟ್ಲ ಕಡೆಯಿಂದ ಬೈಕ್ ನಲ್ಲಿ ಬದಿಯಡ್ಕ ಕಡೆಗೆ ಪ್ರಯಾಣಿಸುವ ವೇಳೆ

ಎದುರಿನಿಂದ ಅತೀ ವೇಗದಿಂದ ಮತ್ತು ಅಜಾಕರುಕತೆಯಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಯೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ಎಚ್.ನಾಗರಾಜ್,ಎಸ್.ಐ.ಸಂದೀಪ್, ಎಚ್.ಸಿ.ಜಯರಾಮ್ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment