ಬಂಟ್ವಾಳ :ಶ್ರೀ ಸಾಯಿ ಕಿಡ್ಸ್ ಝೋನ್ ವಿದ್ಯಾ ಸಂಸ್ಥೆಗಳು ಬಿ ಸಿ ರೋಡ್ ಇಲ್ಲಿ ಜು.27ರಂದು ಶನಿವಾರ ಶಾಲೆಯ ರಕ್ಷಕ ಶಿಕ್ಷಕ ಸಂಘದ ಸಹಯೋಗದೊಂದಿಗೆಶಾಲಾ ವಠಾರದಲ್ಲಿ ಆಟಿದ ಕೂಟ ಮತ್ತು ಆರ್ಟ್ಸ್,ಕ್ರಾಫ್ಟ್ ಮತ್ತು ಪಾರಂಪರಿಕ ವಸ್ತುಗಳ ವಸ್ತು ಪ್ರದರ್ಶನ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂದೀಪ್ ಸಾಲ್ಯಾನ್ .ಪತ್ರಕರ್ತರು ಬಂಟ್ವಾಳ ಇವರು ,ಮಾಡಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಐತಪ್ಪ ಪೂಜಾರಿ ವಹಿಸಲಿರುವರು.. ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ಜ್ಞಾನೇಶ್ ರಾವ್.ಉಪಾಧ್ಯಕ್ಷೆ ಸುಪ್ರಿತ,ಕೋಶಾದ್ಯಕ್ಷ ದೇವೇಂದ್ರಪ್ಪ,ಶಾಲಾ ಸಮಿತಿ ಯ ಸದಸ್ಯರಾದ ರಾಜೇಶ್ ಅಮೀನ್,ಮತ್ತು ಆರತಿ ಅಮೀನ್
ಮುಖ್ಯ ಅತಿಥಿ ಗಳಾಗಿ ಭಾಗವಹಿಸ ಲಿದ್ದಾರೆ.ನಂತರ ಸಂಸ್ಥೆಯ Dmed ವಿದ್ಯಾರ್ಥಿಗಳ ಮತ್ತು ಶಾಲಾ ವಿದ್ಯಾರ್ಥಿಗಳ ಮನರಂಜನಾ ಕಾರ್ಯಕ್ರಮಗಳು ನಡೆಯಲಿದ್ದು.ಬಳಿಕ ಪೋಷಕರು ತಯಾರಿ ಮಾಡಿ ತರುವ ಆಟಿ ತಿಂಗಳ 30 ಕ್ಕೂ ಹೆಚ್ಚು ವಿವಿಧ ಆಹಾರ ಪದಾರ್ಥಗಳೊಂದಿಗೆ ಸಹ ಭೋಜನ ನಡೆಯಲಿದೆ. ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ















