ಆರಂಬೋಡಿ: ಸರಕಾರಿ ಉನ್ನತೀಕರಿಸಿದ ಶಾಲೆಗೆ ವಿವಿಧ ಕೊಡುಗೆಗಳ ಹಸ್ತಾಂತರ.

Coastal Bulletin
ಆರಂಬೋಡಿ: ಸರಕಾರಿ ಉನ್ನತೀಕರಿಸಿದ ಶಾಲೆಗೆ ವಿವಿಧ ಕೊಡುಗೆಗಳ ಹಸ್ತಾಂತರ.

ಬೆಳ್ತಂಗಡಿ: ತಾಲೂಕಿನ ಆರಂಭೋಡಿ ಗ್ರಾಮದ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಮಾಜಿ ಜಿಲ್ಲಾ ಸಹಾಯಕ ಗವರ್ನರ್ ರೋಟೇರಿಯನ್ ರಾಘವೇಂದ್ರ ಭಟ್ ರವರು ಛತ್ರಿಯನ್ನು ವಿತರಿಸಿದರು, ಹಾಗೂ ಆರಂಬೋಡಿ ಪಾಲ್ಯ ವಿದಿತ ಶೆಟ್ಟಿ ಮತ್ತು ದಿನೇಶ್ ಶೆಟ್ಟಿ ದಂಪತಿಯ ಪ್ರಥಮ ಪುತ್ರಿ ದಿವಿ ಶೆಟ್ಟಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಇಲ್ಯಾಸ್ ಅಬ್ದುಲ್ ಹಕೀಂ ಸ್ವಾಗತ ಭಾಷಣ ಮಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಘವೇಂದ್ರ ಭಟ್ ಹಾಗೂ ಉಮೇಶ್ ಶೆಟ್ಟಿ ಪಾಲ್ಯ ಮಕ್ಕಳಿಗೆ ಶಿಕ್ಷಣದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀಮತಿ ವಿದಿತ ಶೆಟ್ಟಿ

ಮಗು ದಿವಿ ಶೆಟ್ಟಿ ಜಗದೀಶ್ ಶೆಟ್ಟಿ ಪಾಲ್ಯ ಚಂದ್ರಹಾಸ ಪೂಜಾರಿ ಮೈರಬೆಟ್ಟು ಗಣೇಶ್ ಶೆಟ್ಟಿಗಾರ್ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಮಕ್ಕಳ ಪೋಷಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು ಮುಖ್ಯ ಶಿಕ್ಷಕಿ ಸುಶೀಲ ಧನ್ಯವಾದ ಸಮರ್ಪಿಸಿದರು.

Leave a Comment