Coastal Bulletin

ಬಂಟ್ವಾಳ: ಇಲ್ಲಿನ ಕಲ್ಲಡ್ಕ ಸಮೀಪದ ಹನುಮಾನ್ ನಗರ ಎಂಬಲ್ಲಿ ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತಿದ್ದ ಪುಟ್ಟ ಬಾಲಕಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.

ಇಲ್ಲಿನ ನಿವಾಸಿ ರವಿ ಆಚಾರ್ಯ ಎಂಬವರ ಪುತ್ರಿ ಆರಾಧ್ಯ ಆಚಾರ್ಯ(6) ಮೃತ ಬಾಲಕಿ. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ನೀಡಲಾಗಿದ್ದು, ಎರಡು ದಿನಗಳ ಹಿಂದೆ ಜ್ವರ ಏಕಾಏಕಿ

ಉಲ್ಬಣಿಸಿದ ಪರಿಣಾಮ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈಕೆ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಮೃತ ಬಾಲಕಿ ಗೌರವಾರ್ಥ ಶಾಲೆಗೆ ಗುರುವಾರ ರಜೆ ಸಾರಲಾಗಿತ್ತು.

Leave a Comment