Coastal Bulletin

ಬಂಟ್ವಾಳ: ಯಕ್ಷಗಾನದಿಂದ ಜ್ಞಾನದ ಉದ್ಧೀಪನವಾಗುವ ಜತೆಗೆ ದೇವರ ಅಸ್ತಿತ್ವದ ಅರಿವು ಉಂಟಾಗುವುದು ಎಂದು ಬಸವನಗುಡಿ ಶ್ರೀ ಬಸವೇಶ್ವರ ದೇವಸ್ಥಾನದ  ಅರ್ಚಕ ಬಾಲಕೃಷ್ಣ ಅರಿಮಣಿತ್ತಾಯ  ಅವರು ಹೇಳಿದರು.

ಅವರು ಪುಂಜಾಲಕಟ್ಟೆ ಬಸವನಗುಡಿ ಶ್ರೀ ವಿಶ್ವಕರ್ಮ ಸಭಾಂಗಣದಲ್ಲಿ ಮಧ್ವ ಯಕ್ಷಕೂಟದ ವತಿಯಿಂದ ನಡೆದ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಪ್ರ.ಅರ್ಚಕ ಶ್ರೀಧರ ಭಟ್ ಅವರು ಮಾತನಾಡಿ, ಕಲಿಯುಗದಲ್ಲಿ ಅಜ್ಞಾನದ ಅಂಧಕಾರದಲ್ಲಿ ಅಧರ್ಮದ ದಾಳಿಗೊಳಗಾದಾಗ ಅಧ:ಪತನಕ್ಕೊಳಗಾಗದಿರಲು ದೇವರ ನಾಮಸ್ಮರಣೆಯ ಮಹತ್ವವನ್ನು ಶನಿ ಮಹಾತ್ಮೆ ಕಥೆ ತಿಳಿಸುವುದು ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಗಿರಿಯಪ್ಪ ಎಂ., ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಳ್ಳಿಪದಕ ಪುರಸ್ಕೃತ ಚಾಲಕ ಜಯಪ್ರಕಾಶ್ ರಾವ್ ಕಾವಳಕಟ್ಟೆ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ

ಪದ್ಮನಾಭ ಸಾಲ್ಯಾನ್ ಕೋಂಕಡ್ಡ, ಕಾವಳಪಡೂರು ಗ್ರಾ.ಪಂ. ಮಾಜಿ ಸದಸ್ಯ ಸದಾಶಿವ ಅಮೀನ್ ಮಧ್ವ ಅವರು ಉಪಸ್ಥಿತರಿದ್ದರು.

 ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಹಿರಿಯ ಅರ್ಥಧಾರಿ ತಿಮ್ಮಪ್ಪ ಶೆಟ್ಟಿ ಪಾತಿಲ,ಯಕ್ಷವಾಸ್ಯಮ್ ಕಾರಿಂಜ ಇದರ ಸಂಚಾಲಕಿ ಸಾಯಿ ಸುಮಾ ನಾವಡ ಕಾರಿಂಜ,ಯಕ್ಷಕೂಟ ಮಧ್ವ ಇದರ ಕಾರ್ಯಕಾರಿ ಸದಸ್ಯರಾದ ನಾರಾಯಣ ಶೆಟ್ಟಿ, ಯುವರಾಜ್ ಶೆಟ್ಟಿ   ಮತ್ತಿತರರು ಉಪಸ್ಥಿತರಿದ್ದರು.

ಯಕ್ಷ ಕೂಟ ಅಧ್ಯಕ್ಷ ಭಾಸ್ಕರ ಶೆಟ್ಟಿ  ಸ್ವಾಗತಿಸಿ, ಪ್ರಸ್ತಾವಿಸಿದರು. ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ  ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ನಡೆಯಿತು.

Leave a Comment