Coastal Bulletin

ಬಂಟ್ವಾಳ : ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಅಣ್ಣಪ್ಪ ಸ್ವಾಮಿ, ದೂಮಾವತಿ, ಬಂಟ ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ಮತ್ತು ಗಡಿ ಪ್ರಧಾನ ಕಾರ್ಯಕ್ರಮ ಎಪ್ರಿಲ್ 24ರಿಂದ 28ರ ವರೆಗೆ ನಡೆಯಲಿದೆ.

ಎಪ್ರಿಲ್ 24ರಂದು  ಸಂಜೆ ಗಂಟೆ 4ಕ್ಕೆ ಭಂಡಾರ ಏರಿ ಧ್ವಜಾವರೋಹಣಗೋಂಡು ನಂತರ ಮೂಲ ಮೈಸಂದಾಯ ನೇಮ, ನಂತರ ಅನ್ನಸಂತರ್ಪಣೆಯ ಬಳಿಕ ಮಲ್೯ ಜುಮಾದಿಗೆ ನೇಮೋತ್ಸವ, ಎಪ್ರಿಲ್ 25ರಂದು ಸಂಜೆ 5ಕ್ಕೆ ಭಜನೆ, 6ಕ್ಕೆ ಅಣ್ಣಪ್ಪ ಸ್ವಾಮಿಗೆ ವಲಸರಿ ನೇಮೋತ್ಸವ, ಇದೇ ಸಂದರ್ಭ ಬಡಾಜೆಗುತ್ತು ರವಿಶಂಕರ ಶೆಟ್ಟಿಯವರಿಗೆ ಅಣ್ಣಪ್ಪ ಸ್ವಾಮಿ ಮತ್ತು ಪರಿಹಾರ ದೈವಗಳ ಪೂರ್ಣ ರೀತಿಯ ಗಡಿಪ್ರಧಾನ ಕಾರ್ಯಕ್ರಮ, ಎಪ್ರಿಲ್ 26ರಂದು

ಬೆಳಿಗ್ಗೆ ಗಂಟೆ 7ಕ್ಕೆ ಧೂಮಾವತಿ ಭಂಟ ಪ್ರಥಮ ನೇಮೋತ್ಸವ, ಸಂಜೆ ಗಂಟೆ 6ರಿಂದ ಅಣ್ಣಪ್ಪ ಸ್ವಾಮಿಗೆ ಕೆರೆ ನೇಮೋತ್ಸವ, ಎಪ್ರಿಲ್‌ 27ರಂದು ಸಂಜೆ ಧೂಮಾವತಿ ಭಂಟ ನೇಮೋತ್ಸವ ನಂತರದ್ವಜಾವರೋಹಣ,  ಭಂಡಾರ ಇಳಿಯುವುದು, 28ರಂದು ಸಂಜೆ 6ಕ್ಕೆ ಕಲಾಯಿ ದರ್ಗಾ ಪರಮೇಶ್ವರಿ ದೇವರಿಗೆ ಮಹಾಪೂಜೆ, ಮಹಾಮ್ಮಾಯಿ ದೇವರಿಗೆ ಮಾರಿಪೂಜೆ ನಡೆಯುವುದು ಎಂದು ದೈವಸ್ಥಾನದ ಆಡಳಿತ ಮೊಕ್ತೇಸರ ಬಡಾಜೆ ರವಿಶಂಕರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment