Coastal Bulletin

ಬಂಟ್ವಾಳ :ನವೋದಯ ಮಿತ್ರ ಕಾಲ ವೃಂದ(ರಿ)ಮತ್ತು ನೇತ್ರಾವತಿ ಮಾತೃ ಮಂಡಳಿ ಇದರ 36ನೇ ವಾರ್ಷಿಕೋತ್ಸವ ಸಮಾರಂಭವು ವಿಜೃಂಭಣೆಯಿಂದ ಏ.22ರಂದು ಶನಿವಾರ ನೆತ್ತರಕೆರೆ ಶಾಲಾ ಮೈದಾನದಲ್ಲಿ ನಡೆಯಿತು.

ಅಂದು ಬೆಳಿಗ್ಗೆ ದೀಪ ಪ್ರಜ್ವಲನೆಗೊಂಡು ,ಭಾರತ ಮಾತೆಗೆ ಪುಷ್ಪರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಅಶ್ವಥಕಟ್ಟೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು.

 

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಾಲ ಗೋಕುಲ, ಮಾತೃ ಮಂಡಳಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ, ನೃತ್ಯ ಸಿಂಚನ ಕಾರ್ಯಕ್ರಮ ನಡೆಯಿತು.

ರಾತ್ರಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮನಸ್ವಿನಿ ಆಸ್ಪತ್ರೆಯ ಆಡಳಿತ ಅಧಿಕಾರಿ, ಖ್ಯಾತ ವೈದ್ಯರಾದ ಡಾ ರವೀಶ್ ತುಂಗ ಮಾತನಾಡಿ, ಊರಿನಲ್ಲಿರುವ ಸಂಘಟನೆಗಳು ಅ ಭಾಗದ ಜನರ ಅಶೋತ್ತರಗಳಿಗೆ ಸ್ಪಂದಿಸಿದರೆ ಸಮಾಜದಲ್ಲಿ ಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ಇಲ್ಲಿನ ಜಂಟಿ ಸಂಘಟನೆಗಳು ಈ ಪರಿಸರದ ಹಾಗೂ ಶಾಲೆಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಹರೀಶ್ ಮಾಂಬಾಡಿ ಹಾಗೂ ಯುವ ಉದ್ಯಮಿ ಉಮೇಶ್ ಶೆಟ್ಟಿ ಬರ್ಕೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ

ಸಂಘದ ಗೌರವಾಧ್ಯಕ್ಷರಾದ ಪಿ ಸುಬ್ರಹ್ಮಣ್ಯರಾವ್ ಶಾಲಾ ಮುಖ್ಯ ಶಿಕ್ಷಕಿ ಸೆಲ್ವಿಯ ಬ್ರಿಗ್ಸ್, ಸಂಚಾಲಕರಾದ ದಾಮೋದರ ನೆತ್ತರಕೆರೆ,ಮಾತೃ ಮಂಡಳಿ ಅಧ್ಯಕ್ಷರಾದ ಮಾಲತಿ ಚಂದ್ರಹಾಸ, ಸಂಚಾಲಕರಾದ ಲಲಿತಾ ಸುಂದರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಇಸ್ರೋ ಕೇಂದ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸುರೇಶ ಬೆಲ್ಚಡ ನೆತ್ತರಕೆರೆ ಹಾಗೂ ಬಾಲ ಗೋಕುಲದ ಮಾತಾಜಿ ಕುಮಾರಿ ಅಶ್ವಿತ ರನ್ನು ಸನ್ಮಾನಿಸಲಾಯಿತು.

ಕುಮಾರಿ ಶ್ರೇಯ, ಕುಮಾರಿ ಹಂಸಿಕ, ಕುಮಾರಿ ಭೂಮಿಕಾ ಇವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಲಾಲ್ ನೆತ್ತರಕೆರೆ ಸ್ವಾಗತಿಸಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಧನ್ಯವಾದವಿತ್ತರು, ಕಾರ್ಯದರ್ಶಿ ಶ್ರೀಧರ್ ವರದಿ ವಾಚಿಸಿ, ಕೋಶಾಧಿಕಾರಿ ಲೋಕೇಶ್ ಹಾಗೂ ವಿದ್ಯಾ ಚಂದ್ರಶೇಖರ್ ಸನ್ಮಾನ ಪತ್ರ ಓದಿದರು. ಪುನೀತ್ ಹಾಗೂ ಲಿಖಿತ ಬಹುಮಾನ ವಿಜೇತರ ಪಟ್ಟಿಯನ್ನು ಓದಿದರು. ವಿಶ್ವನಾಥ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

ನಂತರ ಸಂಘದ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಬಾಕಿಲ್ ದೆಪ್ಪುಲೆ ಎಂಬ ತುಳು ಹಾಸ್ಯಮಯ ಸಾಮಾಜಿಕ ನಾಟಕ ಪ್ರದರ್ಶನಗೊಂಡು ಜನಮನ ರಂಜಿಸಿತು.

Leave a Comment