Coastal Bulletin

ಬಂಟ್ವಾಳ:ಇಲ್ಲಿನ ಬಂಟ್ವಾಳ-ಮೂಡುಬಿದ್ರೆ ಮುಖ್ಯರಸ್ತೆ ನಡುವಿನ ಸಿದ್ಧಕಟ್ಟೆ ಸಮೀಪದ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನ ರೂ 4 ಕೋಟಿ ವೆಚ್ಚದಲ್ಲಿ ಪುನರ್ ನಿಮರ್ಾಣಗೊಂಡು ಇದೇ 24ರಿಂದ 30ರತನಕ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದೆ.

ಕಳೆದ 1965ರಲ್ಲಿ ಮಂಗಳೂರಿನ ಪಣಂಬೂರಿನಿಂದ ಇಲ್ಲಿಗೆ ಬಂದ ನೇಕಾರ ವೃತ್ತಿಯ ಪದ್ಮಶಾಲಿ (ಶೆಟ್ಟಿಗಾರ್) ಸಮುದಾಯವು ಕುಲದೇವರಾದ ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನ ನಿಮರ್ಿಸಿದ್ದಾರೆ. ಈ ಪರಿಸರದಲ್ಲಿ ಪ್ರಥಮ ಬಾರಿಗೆ 'ಅಷ್ಟಪವಿತ್ರ ನಾಗಮಂಡಲೋತ್ಸವ' ನಡೆಸಿದ್ದು, ನಾಗದೇವರು ಮತ್ತು ಪರಿವಾರ ದೈವಗಳ ಆರಾಧನೆಯೊಂದಿಗೆ ವಾಷರ್ಿಕ ಉತ್ಸವವೂ ನಡೆಯುತ್ತಿದೆ. ಕಳೆದ 1996ರಲ್ಲಿ ಸಮುದಾಯ ಭವನ ನಿಮರ್ಾಣ, 2015ರಲ್ಲಿ ಶಿಥಿಲಗೊಂಡ ಶ್ರೀ ಮಹಮ್ಮಾಯಿ ದೇವಸ್ಥಾನ ಪುನರ್ ನಿಮರ್ಿಸಿ ಬ್ರಹ್ಮಕಲಶೋತ್ಸವ ನೆರವೇರಿದೆ.

ಇದೀಗ ರೂ 4 ಕೋಟಿ ವೆಚ್ಚದಲ್ಲಿ ಶ್ರೀ ವೀರಭದ್ರ ಸ್ವಾಮಿ ಮತ್ತು ಶ್ರೀ ದುಗರ್ಾಪರಮೇಶ್ವರಿ ದೇವರಿಗೆ ಶಿಲಾಮಯ ಗರ್ಭಗುಡಿ,

ಶ್ರೀ ಮಹಾಗಣಪತಿ ಮತ್ತು ಧೂಮಾವತಿ ಪರಿವಾರ ದೈವ ಸಹಿತ ಆಕರ್ಷಕ ಸುತ್ತುಗೋಪುರ ನಿಮರ್ಾಣಗೊಂಡಿದೆ. ಇನ್ನೊಂದೆಡೆ ಸುಸಜ್ಜಿತ ಪಾಕಶಾಲೆ, ತಂತ್ರಿಗಳ ಕೊಠಡಿ, ಶೌಚಾಲಯ ನಿಮಾಣಗೊಂಡಿದೆ.

ಇದೇ 24ರಿಂದ ಮೊದಲ್ಗೊಂಡು 30ರತನಕ ಕುಡುಪು ನರಸಿಂಹ ತಂತ್ರಿ ನೇತೃತ್ವದಲ್ಲಿ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದೆ. ಇದೇ 26ರಂದು ಮಧ್ಯಾಹ್ನ 2 ಗಂಟೆಗೆ ಸಿದ್ಧಕಟ್ಟೆಯಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಪ್ರತಿದಿನ ಧಾಮರ್ಿಕ ಸಭೆ, ಭಜನೆ, ನಾಟಕ, ಯಕ್ಷಗಾನ, ನೃತ್ಯರೂಪಕ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ದತ್ತರಾಜ್ ಶೆಟ್ಟಿಗಾರ್ ತಿಳಿಸಿದ್ದಾರೆ.

Leave a Comment