Coastal Bulletin

2022-23 ನೇ ಸಾಲಿನಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಅದರಂತೆ ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ'ಯು ಮಾರ್ಚ್ 2023ನೇ ಸಾಲಿನ 5 ಮತ್ತು 8ನೇ ತರಗತಿಯ ಮೌಲ್ಯಂಕನ (SA-2) ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 5 ಮತ್ತು 8ನೇ ತರಗತಿಯ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ವೇಳಾಪಟ್ಟಿಯ ಪ್ರಕಾರ ದಿನಾಂಕ 13-03-2023 ರಿಂದ 18-03-2023ರ ವರೆಗೆ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಮೌಲ್ಯಂಕನ ಪರೀಕ್ಷೆಗು ಮೊದಲು ದಿನಾಂಕ 06-03-2023 ರಿಂದ 10-03-2023ರ ವರೆಗೆ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಿರ್ವಹಿಸಲು ಮಂಡಲಿ ಸೂಚಿಸಿದೆ.

5ನೇ ತರಗತಿ ವೇಳಾಪಟ್ಟಿ

15-03-2023 ಬುಧವಾರ - ಪ್ರಥಮ ಭಾಷೆ - ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲಗು,

ತಮಿಳು.

16-03-2023 - ಗುರವಾರ- ಕೋರ್ ವಿಷಯ- ಗಣಿತ.

17-03-2023 - ಶುಕ್ರವಾರ - ಕೋರ್ ವಿಷಯ - ಪರಿಸರ ಅಧ್ಯಯನ.

18-03-2023 - ಶನಿವಾರ - ದ್ವಿತೀಯ ಭಾಷೆ - ಇಂಗ್ಲಿಷ್, ಕನ್ನಡ.

8ನೇ ತರಗತಿ ವೇಳಾಪಟ್ಟಿ

13-03-2023- ಸೋಮವಾರ- ಕನ್ನಡ, ಇಂಗ್ಲಿಷ್, ಇಂಗ್ಲಿಷ್ (NCERT), ಹಿಂದಿ, ಉರ್ದು, ಮರಾಠಿ, ತೆಲಗು, ತಮಿಳು, ತೆಲುಗು, ಸಂಸ್ಕೃತ.

14-03-2023 - ಮಂಗಳವಾರ - ದ್ವಿತೀಯ ಭಾಷೆ- ಇಂಗ್ಲಿಷ್, ಕನ್ನಡ.

15-03-2023 - ಬುಧವಾರ- ಹಿಂದಿ, ಹಿಂದಿ (NCERT), ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.

16-03-2023 - ಕೋರ್ ವಿಷಯ- ಗಣಿತ.

17-03-2023 - ಕೋರ್ ವಿಷಯ - ವಿಜ್ಞಾನ.

18-03-2023 - ಕೋರ್ ವಿಷಯ ಸಮಾಜ

Leave a Comment