ಬಂಟ್ವಾಳ :ಶ್ರೀ ಆಂಜನೇಯ ದೇವಸ್ಥಾನ ವಿಜಯನಗರ, ಫರಂಗಿಪೇಟೆ ಇದರ ಪ್ರತಿಷ್ಠಾ ವರ್ಧಂತಿ ಉತ್ಸವವು ಜ.25 ಹಾಗೂ 26ರಂದು ವೇದಮೂರ್ತಿ ಮುರಳಿ ಭಟ್ ಕಲ್ಲತಡಮೆ ಇವರ ನೇತೃತ್ವದಲ್ಲಿ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಜ.25ರಂದು ಆದಿತ್ಯವಾರ ಸೂರ್ಯೋದಯದಿಂದ ಸೂರ್ಯಾಸ್ತದ ತನಕ 48 ದಿನಗಳ ಸಂಧ್ಯಾ ಭಜನಾ ಸೇವೆಯ ಮಂಗಲೋತ್ಸವದ ಪ್ರಯುಕ್ತ ಅರ್ಧ ಏಕಾಹ ಭಜನೆ ನಡೆಯಲಿದೆ, ಬೆಳಗ್ಗೆ ಗಂಟೆ 6.45ಕ್ಕೆ ದೀಪ ಪ್ರಜ್ವಲನೆ ರಾತ್ರಿ ಗಂಟೆ 7.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮದ್ಯಾಹ್ನ ಅನ್ನಪ್ರಸಾದ, ರಾತ್ರಿ ಗಂಟೆ 7.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚೈತನ್ಯ ಕಲಾವಿದರು ಬೈಲೂರು ಅಭಿನಯಿಸುವ ತುಳು ಹಾಸ್ಯಮಯ ನಾಟಕ "ರಾಘು ಮಾಸ್ಟ್ರು"ಪ್ರದರ್ಶನ ಗೊಳ್ಳಲಿದೆ.
ಜ 26ನೇ ಸೋಮವಾರ ಪ್ರಾತಃಕಾಲ ಪೂಜೆ, ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ,ಶ್ರೀ
ಗಣಪತಿ ಹೋಮ, ಕಲಶ ಪೂಜೆ, ಪ್ರಧಾನ ಹೋಮ,ವಾಯುಸ್ತುತಿ ಪುರಶ್ಚರಣ ಹೋಮ, ಪವಮಾನಸೂಕ್ತ ಹೋಮ ಕಲಶಾಭಿಷೇಕ,10.30ರಿಂದ ನಾದಾರ್ಚನೆ,ಮಧ್ಯಾಹ್ನ ಗಂಟೆ 12.15ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ,ಬಳಿಕ ಧಾರ್ಮಿಕ ಸಭೆ, ಅನ್ನಸಂತರ್ಪಣೆ ನಡೆಯಲಿದೆ.ಅಪರಾಹ್ನ 2.00ರಿಂದ 4.00 ಶ್ರೀ ಹನುಮ ಬಾಲಗೋಕುಲದ ಮಕ್ಕಳಿಂದ ನೃತ್ಯ ವೈವಿಧ್ಯ ಬಳಿಕ 6 ಗ್ರಾಮಗಳ ಪ್ರತಿಭಾನ್ವಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ – ನೃತ್ಯ ವೈವಿಧ್ಯ ರಾತ್ರಿ ಗಂಟೆ 8.00ರಿಂದ ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.














