ಸುಜೀರು: ಡಿ.27-28ರಂದು ಶ್ರೀ ದೈವರಾಜ ಕೋರಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ.

Coastal Bulletin
ಸುಜೀರು: ಡಿ.27-28ರಂದು ಶ್ರೀ ದೈವರಾಜ ಕೋರಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ.

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಸುಜೀರು ಶ್ರೀ ದೈವರಾಜ ಕೋರಬ್ಬು ದೈವಸ್ಥಾನದಲ್ಲಿ ಶ್ರೀ ದೈವರಾಜ ಕೋರಬ್ಬು ಮತ್ತು ಪರಿವಾರ ದೈವಗಳಿಗೆ ವರ್ಷಾವಧಿ ನೇಮೋತ್ಸವವು ಡಿ.27 ಹಾಗೂ 28ರಂದು ನಡೆಯಲಿದೆ.


ಡಿ 27ರಂದು ಶನಿವಾರ ಬೆಳಿಗ್ಗೆ ಗಣಹೋಮ 8-30ಕ್ಕೆ ಭಂಡಾರ ಏರಿ ಬಳಿಕ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ಸುಜೀರು ವೇದಮೂರ್ತಿ ಗಣೇಶ್ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಲಿದ್ದು ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ

ನಡೆಯಲಿದೆ, ರಾತ್ರಿ ಗಂಟೆ 10-00ರಿಂದಶ್ರೀ ದೈವರಾಜ ಕೋರಬ್ಬು ತನ್ನಿಮಾನಿಗ ದೈವಗಳಿಗೆ ನೇಮೋತ್ಸವ ಜರುಗಲಿದೆ.

ಡಿ.28ರಂದು ಆದಿತ್ಯವಾರ ಸಂಜೆ ಗಂಟೆ 5-00ರಿಂದ ರಾಹು ಗುಳಿಗ ದೈವಗಳಿಗೆ ನೇಮ, ರಾತ್ರಿ ಗಂಟೆ 9-00ರಿಂದ ಗುಳಿಗ ಪಂಜುರ್ಲಿ ದೈವಗಳಿಗೆ ನೇಮ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Comment