ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆ - 2024 ಫಲಿತಾಂಶ ಪ್ರಕಟ

Coastal Bulletin
ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾಸ್ಪರ್ಧೆ ಮತ್ತು ಕವನ ಸ್ಪರ್ಧೆ - 2024 ಫಲಿತಾಂಶ ಪ್ರಕಟ

ಬಂಟ್ವಾಳ: ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ನಿಮಿತ್ತ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿದ್ದ ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾ ಸ್ಪರ್ಧೆ ಮತ್ತು ಕವನ ಸ್ಪರ್ಧೆಯ ಫಲಿತಾಂಶ ಪತ್ರವನ್ನು ಅನಾವರಣಗೊಳಿಸಿ ಮಾತನಾಡಿದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕೋಶಾಧಿಕಾರಿಯಾದ ಉಪನ್ಯಾಸಕ ಶ್ರೀ ಡಿ ಬಿ ರಹಿಮಾನ್, "ಸಾಹಿತ್ಯ ಎನ್ನುವುದು ಪ್ರೀತಿಯನ್ನು ಹಂಚುವ ಮತ್ತು ಕಟ್ಟುವ ಮಾರ್ಗವಾಗಿದ್ದು ಈ ಮೂಲಕ ಬಾಂಧವ್ಯವನ್ನು ಬೆಸೆಯಲು ಸಾಧ್ಯವಾಗಿದೆ. ಜಾತಿ, ಮತ, ಪಂಥಗಳನ್ನು, ಮೀರಿ ಮನಸ್ಸಿಗೆ ಆಹ್ಲಾದ ನೀಡುವ ಸಾಹಿತ್ಯಾದಿ ಚಟುವಟಿಕೆಗಳು ಯುವ ಮನಸ್ಸುಗಳನ್ನು ಸಮಾಜಮುಖಿ ಚಿಂತನೆಗಳತ್ತ ಕೊಂಡೊಯ್ಯುತ್ತಿದೆ. ಎಲ್ಲರೂ ಓದು ಮತ್ತು ಬರವಣಿಗೆಯತ್ತ ಆಸಕ್ತರಾಗಿ ಕನ್ನಡ ಸಾಹಿತ್ಯ ಕೃಷಿಯನ್ನು ಸಮೃದ್ಧಗೊಳಿಸಬೇಕು" ಎಂದರು.

ಮಂಚಿಯಲ್ಲಿ ಆಯೋಜನೆಯಾಗುತ್ತಿರುವ ಸಾಹಿತ್ಯ ಸಮ್ಮೇಳನ ದ ನಿಮಿತ್ತ ಆಯೋಜನೆಯಾಗಿರುವ ಈ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಸ್ಮರಣ ಸಂಚಿಕೆಯ ಸಮಿತಿಯ ಸಂಚಾಲಕರಾದ ಹಮೀದ್ ಡಿ ಇವರು ವಾಚಿಸಿದರು.  

: ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಸುಲ್ತಾನ್ ಮನ್ಸೂರ್ ಕುಕ್ಕಾಜೆ ಮಂಚಿ , ದ್ವಿತೀಯ ಸ್ಥಾನ : ಚೇತನ್ ಮುಂಡಾಜೆ , ತೃತೀಯ ಸ್ಥಾನ ಹಸೀನ ಮಲ್ನಾಡ್ ಸಹ ಶಿಕ್ಷಕಿ ಸುರಿಬೈಲು ಇವರು ಪಡೆದುಕೊಂಡರು. 

     ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದವರು :

ಹೇಮಂತ್ ಸಜಿಪ ಮುನ್ನೂರು , ತುಳಸಿ ಕೈರಂಗಳ, ಎಚ್ಕೆ ನಯನಾಡು, ಸಂಧ್ಯಾ ಎನ್ ಮಣಿ ನಾಲ್ಕೂರು , ಹಾಶ್ ಮಹಮ್ಮದ್ ಕುಳಾಲು, ರಜನಿ ಚಿಕ್ಕಯ್ಯ ಮಠ ಬಿ.ಸಿ ರೋಡು, ಪೂರ್ಣಿಮಾ ರಾಮಚಂದ್ರ ನಾಯಕ್ ಸಾಲೆತ್ತೂರು

ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ : ಹಸೀನ ಮಲ್ನಾಡ್ ಸಹ ಶಿಕ್ಷಕಿ ಸುರಿಬೈಲು, ದ್ವಿತೀಯ ಸ್ಥಾನ : ಸಂತೋಷ್ ಆಚಾರ್ಯ ಕುರಿಯಾಳ ಸೊರ್ನಾಡು, ತೃತೀಯ ಸ್ಥಾನ : ತುಳಸಿ ಕೈರಂಗಳ ಸಹಶಿಕ್ಷಕಿ ನಾರ್ಶ ಮೈದಾನ ಇವರು ಪಡೆದುಕೊಂಡರು.

ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದವರು: 

ಎಚ್. ಕೆ ನಯನಾಡು , ವಾಣಿ ವಿ.ಎಸ್

ಮಯ್ಯರ ಬೈಲು , ಸಂಧ್ಯಾ ಎನ್ ಮಣಿ ನಾಲ್ಕೂರು, ವಿಜಯಲಕ್ಷ್ಮಿ ವಿ ಶೆಟ್ಟಿ ಪೆರ್ನೆ , ಕೀರ್ತಿ ಎಂ ಮೊಂತಿಮಾರು, ನಿರಂಜನ್ ಕೇಶವ ನಾಯಕ ವಿಟ್ಲ , ಅಬ್ದುಲ್ ಬಾಸಿತ್ ನಚಬೆಟ್ಟು ಪೆರ್ಲಾಪು.

ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರನ್ನು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಹಾಗೂ ಮೆಚ್ಚುಗೆ ಸ್ಥಾನ ಪಡೆದವರಿಗೆ ಪ್ರಶಸ್ತಿ ಪತ್ರ ನೀಡಿ ಸಾಹಿತ್ಯ ಸಮ್ಮೇಳನದ ದಿನ ಗೌರವಿಸಲಾಗುವುದು. 

 ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸುಮಾರು ಐವತ್ತು ಪದಾಧಿಕಾರಿಗಳು ಹಾಗೂ ಸ್ವಾಗತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಕಾರ್ಯಕ್ರಮಕ್ಕೆ ಯಶಸ್ಸನ್ನು ಕೋರಿ ಶುಭ ಹಾರೈಸಿದರು. ಮಂಚಿ - ಕೊಳ್ನಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲ ವಿಟ್ಲ ಉಪಸ್ಥಿತರಿದ್ದರು.

 ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಕೋಶಾಧಿಕಾರಿಯಾದ ಹಾಜಿ ಸುಲೈಮಾನ್ ಸುರಿಬೈಲು, ವಂದಿಸಿದರು. ಬಂಟ್ವಾಳ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment