Coastal Bulletin

ಮಂಗಳೂರು:ದ ಕ ಜಿಲ್ಲಾ ಮೂಲ್ಯರ ಯಾನೇ ಕುಲಾಲರ ಮಾತೃಸಂಘ ಮಂಗಳೂರು ಇದರ ಕೇಂದ್ರಕಾರ್ಯಾಲಯ ಪೊಲೀಸ್ ಲೈನ್ ನಲ್ಲಿರುವ ಶ್ರೀ ದೇವಿ ದೇವಸ್ಥಾನದ ಶ್ರೀ ದೇವಿಗೆ ಚಿನ್ನದ ಮಲ್ಲಿಗೆಯ ಹಾರ ಸಮರ್ಪಣೆಯು ಮಾತೃಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ರವರ ಮಾರ್ಗದರ್ಶನದಂತೆ, ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯೆಯರು ಸಂಕಲ್ಪದಂತೆ ನಡೆಯಿತು.

ಭಕ್ತರಲ್ಲರ  ದೇಣಿಗೆಯಿಂದ ಶ್ರೀದೇವಿಗೆ ಚಿನ್ನದ ಲೇಪನ, ವಜ್ರ ಹಾಗು ಬಿಳಿ ಮುತ್ತುಗಳ ಮೂಗುತಿ,  ಮಲ್ಲಿಯ ಸ್ವರ್ಣಾಹಾರವನ್ನು ಭವ್ಯ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಸಮರ್ಪಣೆಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ಉಪಾಧ್ಯಕ್ಷ ದಯಾನಂದ  ಅಡ್ಯಾರ್, ಕಾರ್ಯದರ್ಶಿ ಶ್ರೀ ಸದಾಶಿವ ಕುಲಾಲ್, ಕೋಶಧಿಕಾರಿ  ಕುಶಲಪ್ಪ ಕುಲಾಲ್, ಜೊತೆ ಕಾರ್ಯದರ್ಶಿ ಪ್ರದೀಪ್ ಅತ್ತಾವರ್.ಸಾಂಸ್ಕೃತಿಕ ಸಂಚಾಲಕ ಪ್ರವೀಣ್ ಬಸ್ತಿ, ದೇವಸ್ಥಾನದ ಅಧ್ಯಕ್ಷ  ಪ್ರಸಾದ್ ಕುಲಾಲ್ ಸಿದ್ದಕಟ್ಟೆ ,ಕಾರ್ಯದರ್ಶಿ ಭವಾನಿ ಶಂಕರ್, ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ  ಟ್ರಸ್ಟಿ ಪುರುಷೋತ್ತಮ ಕುಲಾಲ್ ಕಲ್ಪಾವಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಮೋದರ್, ಸೇವಾ ಟ್ರಸ್ಟಿನ ಅಧ್ಯಕ್ಷ ಬಿ ಪ್ರೇಮಾನಂದ ಕುಲಾಲ್, ಸೇವಾ ಸಮಿತಿಯ ಅಧ್ಯಕ್ಷ ಸುಂದರ್ ಕುಲಾಲ್ ಶಕ್ತಿನಗರ,

ಟ್ರಸ್ಟ್ ಗಳು, ಸಂಘದ ಹಿರಿಯ ಸದಸ್ಯ ಸಾವಿತ್ರಿ ಮಹಾಬಲ ಹಾ0ಡ, ಲೀಲಾವತಿ ಟೀಚರ್, ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ   ಜಲಜಾಕ್ಪಿ ಕುಲಾಲ್,  ಕಾರ್ಯದರ್ಶಿ ಪ್ರಭಾ ಸದಾಶಿವ ಕುಲಾಲ್,ಕೋಶಾಧಿಕಾರಿ ಜ್ಯೋತಿ ಜಯನಂದ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ರೇಖಾ ಸಂಜೀವ, ಉಮಾ ಚಂದ್ರಶೇಖರ ,ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರು,  ಸೇವಾದಳದ ದಳಪತಿ ಕಿರಣ್ ಅಟ್ಲೂರು,  ಯುವ ಘಟಕದ ಸದಸ್ಯರು ,ಜಿಲ್ಲೆಯ  ವಿವಿಧ ಗ್ರಾಮದ ಕುಲಾಲ ಸಮಾಜದ ಸಂಘದ ಪದಾಧಿಕಾರಿಗಳ ಪಾಲ್ಗೊಂಡಿದ್ದರು,

ಸ್ವರ್ಣಹಾರ ಅರ್ಪಣೆಗೆ  ದೇನಿಗೆಯನ್ನು ದಕ್ಷಿಣ ಕನ್ನಡ ಜಿಲ್ಲೆ, ಬೆಂಗಳೂರು ಹಾಗೂ ಮುಂಬಯಿಯಂತಹ ದೂರದೂರಿನ ಸದ್ಭಕ್ತರ   ಧನ ಸಹಾಯದೊಂದಿಗೆ,   ಶ್ರೀದೇವಿಗೆ 9 ಪವನುಗಳ ಚಿನ್ನದ ಮಲ್ಲಿಗೆಯ ಹಾರವನ್ನು ಎಲ್ಲ ಭಕ್ತರ ಸಮ್ಮುಖದಲ್ಲಿ ಸಮರ್ಪಿಸಲಾಯಿತು.

Leave a Comment