ಬಂಟ್ವಾಳ :ಹಿಂದು ಜಾಗರಣ ವೇದಿಕೆ ಸುವರ್ಣನಾಡು ಘಟಕ ಇದರ ಅಶ್ರಯದಲ್ಲಿ ಡಿ. 28ರಂದು ಆದಿತ್ಯವಾರ ಬೆಳಿಗ್ಗೆ 4:00 ಗಂಟೆಗೆ ಲೋಕ ಕಲ್ಯಾಣ ಹಾಗೂ ಸಕಲ ಇಷ್ಟಾರ್ಥ ಸಿದ್ಧಿಗಾಗಿ 7ನೇ ವರ್ಷದ ಪಾದಯಾತ್ರೆಯು ಸುವರ್ಣನಾಡು ಶ್ರೀ ದುರ್ಗಾಂಭಿಕ ಸಿದ್ದೇಶ್ವರಿ ಸಾನಿಧ್ಯದಿಂದ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ನಡೆಯಲಿದೆ.
ಪಾದೆಯಾತ್ರೆಯ ಬಳಿಕ ಧರ್ಮ ಜಾಗೃತಿ ಸಭೆ ನಡೆಯಲಿದ್ದು ಉಪನ್ಯಾಸಕಿ ಸಹನ ಭಟ್ ಬೌಧಿಕ್ ಮಾಡಲಿರುವರು,
ಹಿಂದು ಮುಖಂಡರಾದ ಸಂತೋಷ್ ಪೊಳಲಿ ಹಾಗೂ ಜಗದೀಶ್ ನೆತ್ತರಕೆರೆ ಉಪಸ್ಥಿತಿತರಿರುವರು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ













