ಬಂಟ್ವಾಳ:ಕುಲಾಲ ಸಂಘದ ಆಶ್ರಯದಲ್ಲಿ ತುಡರ್ ಪರ್ಬದ ಐಸಿರ - 2023.

Coastal Bulletin
ಬಂಟ್ವಾಳ:ಕುಲಾಲ ಸಂಘದ ಆಶ್ರಯದಲ್ಲಿ ತುಡರ್ ಪರ್ಬದ ಐಸಿರ - 2023.

ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳ ಮತ್ತು ಮಹಿಳಾ ಘಟಕದ ವತಿಯಿಂದ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಆದಿತ್ಯವಾರ ತುಡರ್ ಪರ್ಬದ ಐಸಿರ ೨೦೨೩ ಗೂಡುದೀಪ ಸ್ಪರ್ಧೆ ಮತ್ತು ಅವಲಕ್ಕಿ ತಯಾರಿ ಸ್ಪರ್ಧೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಶೇಖರ್ ಬಿ., ಬಂಟ್ವಾಳ ತಾಲೂಕು ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು ಅಗಮಿಸಿದ್ದರು. ಸಭಾಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಕುಲಾಲ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ವಹಿಸಿದ್ದರು.

ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮಚ್ಚೇಂದ್ರ, ಸೇವಾದಳಪತಿ ರಾಜೇಶ್ ಕುಮಾರ್ ಉಪಸ್ಥಿತರಿದ್ದರು.

 ವೇದಿಕೆಯಲ್ಲಿ ದೀಪಾವಳಿ ಸಂದರ್ಭ ನಡೆದ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ, ಮಕ್ಕಳಿಂದ ಕುಣಿತ ಭಜನೆ, ಮಹಿಳೆಯರಿಂದ ಭಜನೆ, ಗೂಡುದೀಪ ಸ್ರರ್ಧೆ,ಅವಲಕ್ಕಿ

ತಯಾರಿ ಸ್ಪರ್ಧೆ ಮತ್ತು ಸಾಮೂಹಿಕ ದೀಪಾವಳಿ ಆಚರಣೆ ಕಾರ್ಯಕ್ರಮ ನಡೆಯಿತು.

ಸೇವಾದಳದ ಸದಸ್ಯ ರಾಘವೇಂದ್ರ ಕಾಮಾಜೆ ಸ್ವಾಗತಿಸಿದರು, ದೇವದಾಸ ಅಗ್ರಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಜೇಶ್ ಭಂಡಾರಿಬೆಟ್ಟು ಧನ್ಯವಾದ ನೀಡಿದರು. ಗಣೇಶ್ ಕುಲಾಲ್ ಬೆದ್ರಗುಡ್ಡೆ, ದರ್ಶನ್ ಮೊಡಂಕಾಪು, ಯಾದವ ಅಗ್ರಬೈಲು, ತಾರನಾಥ ಮೊಡಂಕಾಪು, ಗಣೇಶ್ ಕುಲಾಲ್ ಮೊಡಂಕಾಪು ಪ್ರೇಮನಾಥ ನೇರಂಬೋಳು ಸಹಕರಿಸಿದ್ದರು. ಸುಕನ್ಯ, ಮಿಥ್ವಿ, ವೈಷ್ಣವಿ, ಸಾನ್ವಿ ಮತ್ತು ಬಳಗ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಜಯಂತ ಅಗ್ರಬೈಲು ಕಾರ್ಯಕ್ರಮ ನಿರೂಪಿಸಿದರು.

Leave a Comment