ಬಂಟ್ವಾಳ :ರೋಟರಿ ಕ್ಲಬ್ ಮೊಡಂಕಾಪು, ಆನಂದಾಶ್ರಮ ಸೇವಾ ಟ್ರಸ್ (ರಿ)ಪುತ್ತೂರ್, ದಕ್ಷಿಣ ಕನ್ನಡ ಜಿಲ್ಲಾ ಸಂಚಾರಿ ನೇತ್ರ ಘಟಕ ಜಿಲ್ಲಾ ಆಸ್ಪತ್ರೆ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಪುದು, ಕಳ್ಳಿಗೆ ಗ್ರಾಮ ಪಂಚಾಯತ್,ಲಕ್ಷ್ಮಿ ವಿಷ್ಣು ಸೇವಾ ಸಂಘ ಜಾರಂದಗುಡ್ಡೆ,,ಸೀನಿಯರ್ ಛೇಂಬರ್ ಬಿ.ಸಿ.ರೋಡ್( ಬಂಟ್ವಾಳ ನೇತ್ರಾವತಿ ಸಂಗಮ) ಇವರ ಜಂಟಿ ಆಶ್ರಯದಲ್ಲಿ ಡಿ.08ರಂದು ಶುಕ್ರವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:30 ತನಕ ತಾಲೂಕಿನ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆ ಸಂಘದ ಕಛೇರಿ ಬಳಿ ಪ್ರಸಿದ್ಧ ನೇತ್ರ ತಜ್ಞರ ನೇತೃತ್ವದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣಾ ಶಿಬಿರ ನಡೆಯಲಿದೆ ಎಂದು ಸೀನಿಯರ್ ಛೇಂಬರ್ ಅಧ್ಯಕ್ಷರಾದ ಡಾ.ಆನಂದ್ ಬಂಜನ್ ಪ್ರಕಟಣೆ ತಿಳಿಸಿದ್ದಾರೆ.
ಚಿಕಿತ್ಸಾ ವಿಷೇಶತೆಗಳು
ಆನಂದ ಸೇವಾ ಟ್ರಸ್ಟ್ (ರಿ)ಪುತ್ತೂರು ಇವರ ವತಿಯಿಂದ ಉಚಿತವಾಗಿ ಕನ್ನಡಕ ವನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು.
ಆದೇ ರೀತಿ ಉಚಿತ ಕಣ್ಣಿನ ಪರೀಕ್ಷೆ ಚಿಕಿತ್ಸೆ ಸಲಹೆ ಮತ್ತು ಉಚಿತ ಕಣ್ಣಿನ ಪೊರೆ ಆಪರೇಷನ್ (I. U. L)ಸರಕಾರಿ
ವೆನ್ಲಾಕ್ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ನಂಬರ್
9845613007 ಪಿ.ಎ ರಹೀಮ್ ಅಧ್ಯಕ್ಷರು ರೋಟರಿ ಕ್ಲಬ್ ಮೊಡಂಕಾಪು
ಸುಧೀಂದ್ರ 9741835743 ಅಧ್ಯಕ್ಷರು, ಲಕ್ಷ್ಮಿ ವಿಷ್ಣು ಸೇವಾ ಸಂಘ
Snr.ಡಾ.ಆನಂದ್ ಬಂಜನ್ ಅಧ್ಯಕ್ಷರು ಸೀನಿಯರ್ ಛೇಂಬರ್ ಬಂಟ್ವಾಳ ನೇತ್ರಾವತಿ ಸಂಗಮ















