ಮೊಡಂಕಾಪು: ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ರಜತಮಹೋತ್ಸವಕ್ಕೆ ಚಾಲನೆ.

Coastal Bulletin
ಮೊಡಂಕಾಪು: ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ರಜತಮಹೋತ್ಸವಕ್ಕೆ ಚಾಲನೆ.

ಬಂಟ್ವಾಳ:ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ರಜತಮಹೋತ್ಸವ ಕಾರ್ಯಕ್ರಮವನ್ನು ಶಾಸಕರಾದ ರಾಜೇಶ್ ನಾಯ್ಕ ಉಳಿಪಾಡಿಗುತ್ತು ಅವರು ಉದ್ಘಾಟಿಸಿ ಶುಭ ಹಾರೈಸಿದರು.

ಅಧ್ಯಕ್ಷ ಮೊಂಜೊರ್ ಮ್ಯಾಕ್ಸಿ ಎಲ್, ನೊರೊನ್ಹಾ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ., ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಹೆರಾಲ್ಡ್‌ ಡಿಸೋಜ, ಕಾರ್ಯದರ್ಶಿಗಳಾದ ಸುನಿಲ್ ವೇಗಸ್, ಜೋಸ್ಟಿನ್ ಡಿಸೋಜ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಅಪ್ಪಯ್ಯ ಶೆಟ್ಟಿ, ಶಾಲಾ ಸಂಚಾಲಕರಾದ ಫಾ. ವಲೇರಿಯನ್ ಡಿಸೋಜ, ಮೆಲ್ವಿನ್ ಲೋಬೊರವರು ಉಪಸ್ಥಿತರಿದ್ದರು.

ಇದೇ ವೇಳೆ ರಜತಮಹೋತ್ಸವದ ಲೋಗೊವನ್ನು ಅನಾವರಣಗೊಳಿಸಲಾಯಿತು. ಆದೇರಿತಿ ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಹೆತ್ತವರ ಜೊತೆಗೂಡಿ ಸನ್ಮಾನಿಸಲಾಯಿತು.ಸಂಸ್ಥೆಯ ಅನುಮತಿಯನ್ನು ಪಡೆಯಲು ಶ್ರಮಿಸಿದವರನ್ನು ಆಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ರ್ಕಾರ್ಯಕ್ರಮಗಳು ನಡೆಯಿತು.Leave a Comment