ಬಂಟ್ವಾಳ: ಪುನರ್ ನಿರ್ಮಾಣಗೊಂಡಿರುವ ಬಂಟ್ವಾಳ ತಾಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಪುನ:ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಬೆಳಗ್ಗೆ ೮.೩೦ರ ಮೀನ ಲಗ್ನದಲ್ಲಿ ಪರಿವಾರ ಸಹಿತ ಶ್ರೀ ಮಹಾಲಿಂಗೇಶ್ವರ ದೇವರ ಬಿಂಬ ಪ್ರತಿಷ್ಠೆ, ಅಷ್ಠ ಬಂಧ ಲೇಪನ, ಪೂರ್ಣ ನವಗ್ರಹ ಯಾಗ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭೆಯನ್ನು ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವೇ.ಮೂ. ಈಶ್ವರ ಭಟ್ ಅಲಂಗಾರು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಜೀವನದಲ್ಲಿ ಜ್ಞಾನ ಸಂಪಾದನೆ ಪ್ರಮುಖ್ಯವಾಗಿದ್ದು, ಧರ್ಮ ಮಾರ್ಗದಲ್ಲಿ ನಡೆಯುವುದು,ದೇವರಲ್ಲಿ ಭಯ, ಭಕ್ತಿಯಿಂದ ನಡಕೊಳ್ಳುವುದರ ಮೂಲಕ ದೇವರ ದಯೆ ಗಳಿಸುವದರಿಂದ ಜ್ಞಾನ ಪ್ರಾಪ್ತಿಯಾಗುವುದು ಎಂದು ಹೇಳಿದರು.
ಕ್ಷೇತ್ರದ ತಂತ್ರಿಗಳಾದ ವೇ.ಮೂ.ವೇ.ಮೂ. ನಡ್ವಂತಾಡಿ ವೇದವ್ಯಾಸ ಪಾಂಗಣ್ಣಾಯ ಅವರು ಮಾತನಾಡಿ, ಸಾನ್ನಿಧ್ಯ ಉತ್ಪತ್ತಿಯಾಗಿರುವ ಈ ಕ್ಷೇತ್ರದಲ್ಲಿ ಕ್ಷೇತ್ರದ ನಿಯಮ ನಿರಂತರವಾಗಿ ಪ್ರಕಾರ ನಿತ್ಯ ಪೂಜೆ, ಅನ್ನದಾನ,ಉತ್ಸವಾದಿ ಕಾರ್ಯಕ್ರಮಗಳನ್ನು ನಡೆಸಿಕೊಡು ಬರುವುದರಿಂದ ಸಾನ್ನಿಧ್ಯ ವೃದ್ಧಿಯಾಗುವುದು ಎಂದರು.
ಮಾವಂತೂರು ಶ್ರೀ ಬಲವಂಡಿ ಪಿಲಿಚಾಮುಂಡಿ ಕ್ಷೇತ್ರದ ಗಡಿ ಪ್ರಧಾನರಾದ ದುರ್ಗಾದಾಸ್ ಶೆಟ್ಟಿ ಮಾವಂತೂರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನ ಸಂಸ್ಕಾರ, ಅನ್ನದಾನ, ವಿದ್ಯೆ, ಆರೋಗ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಕೇಂದ್ರಗಳಾಗಬೇಕು ಎಂದರು.
ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಪತ್ರಕರ್ತ ಸುಖಪಾಲ್ ಪೊಳಲಿ ಶುಭಹಾರೈಸಿದರು.
ಕ್ಷೇತ್ರದ ಪ್ರ.ಅರ್ಚಕ ಡಿ.ರಾಮಚಂದ್ರ ಭಟ್ ದೈಲ, ದಿನೇಶ್ ಭಟ್ ದೈಲ, ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಶ್ ಗೌಡ ಮುದ್ದಾಜೆ, ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಬದನಡಿ, ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನ ಕುಮಾರ ಚೌಟ,
ಕಂಬಳ ಸಾಧಕ ಹೊಂಗಾರ ಹಿತ್ಲು ಕಾಂತಣ್ಣ ಶೆಟ್ಟಿ, ಪಂಜಿಕಲ್ಲು ಬ್ರಹ್ಮ ಬದರ್ಕಳ ಗರೊಡಿಯ ಅಧ್ಯಕ್ಷ ಶ್ರೀಪ್ರಕಾಶ್ ಜೈನ್ ಪೀರ್ದೊಟ್ಟು, ಕೈತ್ರೋಡಿ ಶ್ರೀ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಡಾ.ಲೋಕೇಶ್ ಕೈತ್ರೋಡಿ, ನೆಕ್ಕರೆಗುರಿ ಶ್ರೀ ಅಯ್ಯಪ್ಪ ಮಂದಿರದ ಮೊಕ್ತೇಸರ ದೇವಪ್ಪ ಕರ್ಕೇರಾ, ಮುಗೇರ ಗುಡ್ಡೆ ಶ್ರೀ ಬ್ರಹ್ಮ ಮುಗೇರ ಕೊರಗಜ್ಜ ಕ್ಷೇತ್ರದ ಅಧ್ಯಕ್ಷ ರವೀಂದ್ರ ಪೂಜಾರಿ ಮದಂಗೋಡಿ, ರಾಯಿ ಗ್ರಾಮ ಕರಣಿಕ ಪರೀಕ್ಷಿತ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಗೌರವಾಧ್ಯಕ್ಷ ರಾಜೇಶ್ ಶೆಟ್ಟಿ ಶೀತಾಳ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಗೌಡ ಮತ್ತಾವು , ರಾಯಿ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಗೌಡ ಕಾರಂಬಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಚೌಟ ಮಡಂದೂರು, ಭಜನಾ ಮಂಡಳಿ ಅಧ್ಯಕ್ಷ ರಾಜೇಶ್ ಶಿವನಗರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಪ್ರದೀಪ್ ಮಿಯಾಲು, ವ್ಯವಸ್ಥಾಪನ ಸಮಿತಿ, ಜೀರ್ಣೋದ್ದಾರ ಸಮಿತಿ, ಬ್ರಹ್ಮ ಕಲಶೋತ್ಸವ ಸಮಿತಿ, ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ಸಮಿತಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ಸಾತ್ವಿಕ್ ಮತ್ತಾವು ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸಮಿತ್ ಶಿವನಗರ ಸ್ವಾಗತಿಸಿ, ಪ್ರಸ್ತಾವಿಸಿದರು. ಕೋಶಾಽಕಾರಿ ಗಣೇಶ್ ಬರೆಬಾಯಿ ವಂದಿಸಿದರು. ಸತೀಶ್ ಕುಲಾಲ್ ಹೊಸ್ಮಾರು ಮತ್ತು ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು










