ಬಂಟ್ವಾಳ: ಇತ್ತೀಚೆಗಷ್ಟೇ ತನ್ನ 75ನೇ ಹಟ್ಟು ಹಬ್ಬವನ್ನು ಆಚರಿಸಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರಿಗೆ ವಸಂತ ಬಂಗೇರ ಅಭಿಮಾನಿ ಬಳಗ ತುಂಬೆಯ ವತಿಯಿಂದ ಗೌರವಿಸಲಾಯಿತು.
ಬೆಳ್ತಂಗಡಿಯ ಅವರ ಕಚೇರಿಗೆ ತೆರಳಿದ್ದ ಅಭಿಮಾನಿ ಬಳಗದ ಪ್ರಮುಖರು, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಆಡಳಿತ ಮೋಕ್ತೇಸರ ಮೋನಪ್ಪ ಮಜಿ ಸನ್ಮಾನಿಸಿದರು. ಈ ಸಂದರ್ಭ
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ತುಂಬೆ, ಪ್ರಮುಖರಾದ ಎಂ.ಕೆ. ಖಾದರ್, ಧೀರೇಂದ್ರ ಬಿ.ಸಿ.ರೋಡು, ಜಗದೀಶ ಗಟ್ಟಿ ತುಂಬೆ ಉಪಸ್ಥಿತರಿದ್ದರು.














